ಹೈದರಾಬಾದ್:ದೇಶಾದ್ಯಂತ ಎರಡನೇ ಹಂತದ ಕೋವಿಡ್ ಅಲೆ ಜೋರಾಗಿದ್ದು, ಪ್ರತಿದಿನ ಲಕ್ಷಾಂತರ ಪಾಸಿಟಿವ್ ಪ್ರಕರಣಗಳು ಪತ್ತೆಯಾಗುತ್ತಿವೆ. ಈ ಮಧ್ಯೆ ಸಾವಿರಾರು ಜನರು ತಮ್ಮ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಡೆಡ್ಲಿ ವೈರಸ್ ಬಗ್ಗೆ ಈಗಾಗಲೇ ಅನೇಕ ಸೆಲಿಬ್ರೆಟಿಗಳು ಜಾಗೃತಿ ಮೂಡಿಸುವ ಕೆಲಸ ಮಾಡ್ತಿದ್ದಾರೆ.
ಇದೀಗ ರಾಜಮೌಳಿ ನಿರ್ದೇಶನದ 'ಆರ್ ಆರ್ ಆರ್' ಚಿತ್ರತಂಡ ವಿಡಿಯೋ ತುಣುಕವೊಂದನ್ನ ಶೇರ್ ಮಾಡಿದ್ದು, ಕೋವಿಡ್ ಬಗ್ಗೆ ಜಾಗೃತಿ ಮೂಡಿಸಿದೆ.
ಕೋವಿಡ್ ಬಗ್ಗೆ 'RRR' ಚಿತ್ರ ತಂಡದಿಂದ ವಿಡಿಯೋ ರಿಲೀಸ್; ಕನ್ನಡದಲ್ಲೇ ಮನವಿ ಮಾಡಿದ ಜೂ.ಎನ್ಟಿಆರ್ ಚಿತ್ರ ತಂಡದ ನಟರಾದ ರಾಮ್ ಚರಣ್, ಜೂ. ಎನ್ಟಿಆರ್, ಆಲಿಯಾ ಭಟ್, ಅಜಯ್ ದೇವಗನ್ ಹಾಗೂ ನಿರ್ದೇಶಕ ರಾಜಮೌಳಿ ವಿಶೇಷ ಮನವಿ ಮಾಡಿಕೊಂಡಿದ್ದಾರೆ. ಈ ವಿಡಿಯೋ ತುಣುಕೊಂದನ್ನು ನಟಿ ಆಲಿಯಾ ಭಟ್ ತಮ್ಮ ಟ್ವಿಟರ್ ಅಕೌಂಟ್ನಲ್ಲಿ ಶೇರ್ ಮಾಡಿದ್ದಾರೆ.
ಕೋವಿಡ್ ವಿರುದ್ಧದ ಹೋರಾಟದಲ್ಲಿ ಮಾಸ್ಕ್ಗಳು, ಸ್ಯಾನಿಟೈಸರ್ಗಳು ದೊಡ್ಡ ಅಸ್ತ್ರಗಳಾಗಿದ್ದು, ಮಾಸ್ಕ್ಗಳನ್ನ ಯಾವಾಗಲೂ ಹಾಕಿಕೊಂಡು, ಮೇಲಿಂದ ಮೇಲೆ ಕೈ ಸ್ವಚ್ಛಗೊಳಿಸಿಕೊಳ್ಳಿ ಎಂದಿದ್ದಾರೆ. ಜತೆಗೆ ಕೋವಿಡ್ ವ್ಯಾಕ್ಸಿನ್ ಹಾಕಿಸಿಕೊಳ್ಳಿ ಹಾಗೂ ಇತರರೂ ಲಸಿಕೆ ತೆಗೆದುಕೊಳ್ಳುವಂತೆ ಪ್ರೋತ್ಸಾಹಿಸಿ ಎಂದು ಮನವಿ ಮಾಡಿದ್ದಾರೆ.