ಕಾನ್ಪುರ (ಉತ್ತರ ಪ್ರದೇಶ):ಪ್ರಯಾಣಿಕ ಮತ್ತು ಆತನ 80 ವರ್ಷದ ತಂದೆಗೆ 1.17 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಉತ್ತರ ಪ್ರದೇಶದ ನ್ಯಾಯಾಲಯವೊಂದು ಖಾಸಗಿ ವಿಮಾನಯಾನ ಸಂಸ್ಥೆಗೆ ಆದೇಶ ನೀಡಿದೆ.
ಈ ಘಟನೆಯು ಡಿಸೆಂಬರ್ 2019 ರ ಹಿಂದಿನದು, ಪ್ರಯಾಣಿಕ ಮತ್ತು ಅವನ ತಂದೆ ವಿಮಾನಯಾನದಲ್ಲಿ ಅಹಮದಾಬಾದ್‌ನಿಂದ ಲಕ್ನೋಗೆ ಪ್ರಯಾಣಿಸಲು ನಿರ್ಧರಿಸಿದ್ದರು. ಪ್ರಯಾಣಕ್ಕೆ ನಾಲ್ಕು ದಿನಗಳ ಮೊದಲು, ವಿಮಾನಯಾನ ಸಂಸ್ಥೆಯು ವಿಮಾನ ರದ್ದತಿ ಬಗ್ಗೆ ಸಂದೇಶವನ್ನು ಕಳುಹಿಸಿದೆ. ಆದರೆ, ವಿಮಾನದ ಟಿಕೆಟ್ನ 17,982 ದರವನ್ನು ಮರುಪಾವತಿ ಮಾಡಲಿಲ್ಲ. ಲೋಕ ಅದಾಲತ್‌ನಲ್ಲಿ ಸೋಮವಾರ ಏರ್‌ಲೈನ್‌ಗೆ ಪರಿಹಾರ ಮತ್ತು ಟಿಕೆಟ್ ವೆಚ್ಚ ಸೇರಿದಂತೆ 1.17 ಲಕ್ಷ ರೂ. ಪರಿಹಾರ ನೀಡಲು ಆದೇಶಿಸಲಾಗಿದೆ.
ಈ ಪ್ರಕರಣವು ಡಿಸೆಂಬರ್ 2019 ರ ಹಿಂದಿನದು, ವಕೀಲ ಅನುಪ್ ಶುಕ್ಲಾ ಮತ್ತು ಅವರ ತಂದೆ ಕಾನ್ಪುರ ನಿವಾಸಿಗಳು. ಅವರು ವಿಮಾನಯಾನದಿಂದ ಅಹಮದಾಬಾದ್‌ನಿಂದ ಲಕ್ನೋಗೆ ಬರಲು ಯೋಜಿಸಿದ್ದರು. ಡಿಸೆಂಬರ್ 29 ರಂದು ನಿಗದಿಯಾಗಿದ್ದ ಪ್ರಯಾಣಕ್ಕಾಗಿ ಅವರು ಡಿಸೆಂಬರ್ 9, 2019 ರಂದು 4,502 ರೂ. ಪಾವತಿಸಿ ಟಿಕೆಟ್‌ಗಳನ್ನು ಕಾಯ್ದಿರಿಸಿದ್ದರು. ಶುಕ್ಲಾ ಅವರು ಡಿಸೆಂಬರ್ 25 ರಂದು ಅಹಮದಾಬಾದ್‌ನಿಂದ ಸೋಮನಾಥ ದೇವಸ್ಥಾನಕ್ಕೆ ರೈಲಿನಲ್ಲಿ ತನ್ನ ತಂದೆಯನ್ನು ಕರೆದುಕೊಂಡು ಹೋಗಲು ಯೋಜಿಸಿದ್ದರು. ಡಿಸೆಂಬರ್ 25ರ ಸಂಜೆ ಅವರಿಗೆ ವಿಮಾನಯಾನ ಸಂಸ್ಥೆಯಿಂದ ವಿಮಾನ ರದ್ದಾದ ಬಗ್ಗೆ ಸಂದೇಶ ಬಂದಿತ್ತು. ಆದಾಗ್ಯೂ, ವಿಮಾನಯಾನ ಸಂಸ್ಥೆಯಿಂದ ಯಾವುದೇ ಮರುಪಾವತಿ ಮಾಡಿರಲಿಲ್ಲ.
ಶುಕ್ಲಾ ಅವರು ಪ್ರಮುಖ ಬ್ಯುಸಿನೆಸ್ ಮೀಟಿಂಗ್ಗಾಗಿ ಡಿಸೆಂಬರ್ 29 ರಂದು ಲಕ್ನೋವನ್ನು ತಲುಪಬೇಕಾಗಿರುವುದರಿಂದ, ಅಹಮದಾಬಾದ್‌ನಿಂದ ಕಾನ್ಪುರಕ್ಕೆ ತೆರಳಲು ಮತ್ತೊಂದು ವಿಮಾನ ಟಿಕೆಟ್ ಕಾಯ್ದಿರಿಸಲು 13,480 ರೂಪಾಯಿ ಪಾವತಿಸಿದ್ದರು. ಶುಕ್ಲಾ ಅವರು ಪ್ರಯಾಣಕ್ಕಾಗಿ ಒಟ್ಟು 17,982 ರೂ. ವೆಚ್ಚ ಮಾಡಿದ್ದರು.
ಅದರ ನಂತರ, ಪ್ರಯಾಣಿಕರು ಶಾಶ್ವತ ಲೋಕ ಅದಾಲತ್‌ನಲ್ಲಿ ಏರ್‌ಲೈನ್ ಮತ್ತು ಅದರ ವ್ಯವಸ್ಥಾಪಕ ನಿರ್ದೇಶಕರ ವಿರುದ್ಧ ಮೊಕದ್ದಮೆ ಹೂಡಿದ್ದರು. ಅಧ್ಯಕ್ಷ ಅಖಿಲೇಶ್ ಕುಮಾರ್ ತಿವಾರಿ, ಸದಸ್ಯರಾದ ಮೀನಾ ರಾಥೋಡ್ ಮತ್ತು ಅಮಿತ್ ದೀಕ್ಷಿತ್ ಅವರನ್ನೊಳಗೊಂಡ ಶಾಶ್ವತ ಲೋಕ ಅದಾಲತ್‌ನ ತ್ರಿಸದಸ್ಯ ಪೀಠವು ಸೋಮವಾರ ವಿಮಾನಯಾನ ಸಂಸ್ಥೆಗೆ ಟಿಕೆಟ್ ವೆಚ್ಚವಾಗಿ 17,982 ರೂ. ಜೊತೆಗೆ ಪ್ರಯಾಣಿಕರ ಮಾನಸಿಕ ಸಂಕಟ ಅನುಭವಿಸಿದ ಹಿನ್ನಲೆ, ಪರಿಹಾರವಾಗಿ ಒಂದು ಲಕ್ಷ ರೂ. ನೀಡುವಂತೆ ತಿಳಿಸಲಾಗಿದೆ. 2019 ರಲ್ಲಿ ಉಸ್ತುವಾರಿ ವಹಿಸಿದ್ದ ಏರ್‌ಲೈನ್ಸ್ ವ್ಯವಸ್ಥಾಪಕ ನಿರ್ದೇಶಕರು ತಿಳಿಸಲಾಗಿರುವ ಮೊತ್ತವನ್ನು ಪ್ರಯಾಣಿಕರಿಗೆ ಹಿಂತಿರುಗಿಸಬೇಕಾಗುತ್ತದೆ ಎಂದು ಆದೇಶದಲ್ಲಿ ವಿವರಿಸಲಾಗಿದೆ.
80 ವರ್ಷದ ತಂದೆಗೆ ಮಾನಸಿಕ ಕಿರುಕುಳ ನೀಡಿದ್ದಕ್ಕಾಗಿ 50 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ವಕೀಲರು ಒತ್ತಾಯಿಸಿದ್ದರು. ಫೆಬ್ರವರಿ 20, 2020 ರಂದು ಟ್ರಾವೆಲ್ ಏಜೆಂಟ್ ಮೂಲಕ ಟಿಕೆಟ್ ದರವನ್ನು ಹಿಂದಿರುಗಿಸಿದೆ. ಜೊತೆಗೆ ಅಡ್ಜೆಸ್ಟ್ಮೆಂಟ್ ಮಾಡಲು ಸೆಪ್ಟೆಂಬರ್ 6 ರಂದು ನಿಗದಿಪಡಿಸಲಾಗಿತ್ತು ಎಂದು ವಿಮಾನಯಾನ ಸಂಸ್ಥೆ ತಿಳಿಸಿತ್ತು. ಆದರೆ, ನಿಗದಿತ ದಿನಾಂಕದಂದು ವಿಮಾನಯಾನ ಸಂಸ್ಥೆಯಿಂದ ಯಾವುದೇ ಪ್ರತಿನಿಧಿಗಳಿಂದ ಪ್ರತಿಕ್ರಿಯೆ ಬಾರದ ಕಾರಣ, ಶಾಶ್ವತ ಲೋಕ ಅದಾಲತ್ ಸೋಮವಾರ ತನ್ನ ತೀರ್ಪು ಪ್ರಕಟಿಸಿತು.
ಇದನ್ನೂ ಓದಿ:ಮಾಲ್ ಆಫ್ ಏಷ್ಯಾದ ವಿರುದ್ಧ ಕ್ರಮ ಕೈಗೊಳ್ಳದಂತೆ ಹಿಂದೆ ನೀಡಿದ್ದ ಮಧ್ಯೆಂತರ ಆದೇಶ ವಿಸ್ತರಿಸಿದ ಹೈಕೋರ್ಟ್