ಕರ್ನಾಟಕ

karnataka

ETV Bharat / bharat

ವಡೋದರಾದಲ್ಲಿ ಏರ್​ಕ್ರಾಫ್ಟ್​ ರೆಸ್ಟೋರೆಂಟ್​ ಓಪನ್: ಏನಿದರ ವಿಶೇಷತೆ? - Gujarat

ಗುಜರಾತ್​ನ ವಡೋದರಾದಲ್ಲಿ ಹಳೆಯ ವಿಮಾನವನ್ನು ಬಳಸಿ 'ಏರ್​ಕ್ರಾಫ್ಟ್​​ ರೆಸ್ಟೋರೆಂಟ್'​​ ನಿರ್ಮಿಸಲಾಗಿದೆ. ಇದರಲ್ಲಿ ಕುಳಿತರೆ ನಿಜವಾಗಿಯೂ ವಿಮಾನದಲ್ಲಿಯೇ ಪ್ರಯಾಣಿಸಿದಂತೆ ಭಾಸವಾಗುತ್ತದೆ. ಅಲ್ಲದೇ, ಇಲ್ಲಿ ವೇಟರ್​, ಸರ್ವರ್​ಗಳು ಗಗನಸಖಿಯರಂತೆ ದಿರಿಸು ಧರಿಸಿರುತ್ತಾರೆ.

Aircraft
ಏರ್​ಕ್ರಾಫ್ಟ್​ ರೆಸ್ಟೋರೆಂಟ್​

By

Published : Oct 28, 2021, 8:18 AM IST

Updated : Oct 28, 2021, 9:23 AM IST

ವಡೋದರಾ(ಗುಜರಾತ್): ನಗರದ ತಾರ್ಸಾಲಿ ಬೈಪಾಸ್‌ನಲ್ಲಿ ರಾಜ್ಯದ ಮೊದಲ ಏರ್‌ಕ್ರಾಫ್ಟ್ ರೆಸ್ಟೋರೆಂಟ್ ನಿರ್ಮಿಸಲಾಗಿದ್ದು, ಸೋಮವಾರ (ಅಕ್ಟೋಬರ್ 25) ಸಾರ್ವಜನಿಕರಿಗೆ ಮುಕ್ತವಾಗಿದೆ. ಇದು ವಿಶ್ವದ ಒಂಬತ್ತನೇ ಏರ್​ಕ್ರಾಫ್ಟ್​​ ರೆಸ್ಟೋರೆಂಟ್ ಆಗಿದೆ.

ವಡೋದರಾದಲ್ಲಿ ಏರ್​ಕ್ರಾಫ್ಟ್​ ರೆಸ್ಟೋರೆಂಟ್​ ಓಪನ್

ಭಾರತದಲ್ಲಿ ಹಳೆಯ(ಸಂಚಾರ ನಡೆಸದ) ವಿಮಾನವನ್ನು ಬಳಸಿ ಅಭಿವೃದ್ಧಿಪಡಿಸಿದ ನಾಲ್ಕನೇ ರೆಸ್ಟೋರೆಂಟ್ ಇದಾಗಿದ್ದು, 102 ಗ್ರಾಹಕರು ಕೂರುವ ಸಾಮರ್ಥ್ಯ ಹೊಂದಿದೆ. ಈ ರೆಸ್ಟೋರೆಂಟ್​ ನಿರ್ಮಿಸುವ ಸಲುವಾಗಿ ಬೆಂಗಳೂರಿನ ಕಂಪನಿಯೊಂದರಿಂದ 1.40 ಕೋಟಿ ರೂ.ವೆಚ್ಚದಲ್ಲಿ ಏರ್​ಬಸ್​ 320 ಅನ್ನು ಖರೀದಿಸಲಾಗಿದೆ. ಈ ಗುಜರಿ ವಿಮಾನದ ಪ್ರತಿಯೊಂದು ಭಾಗವನ್ನು ತಂದು ಬಸ್​​ ಜತೆ ಜೋಡಿಸಿ ಮರು ವಿನ್ಯಾಸಗೊಳಿಸಲಾಗಿದೆ. ಸದ್ಯ ಇದರ ಬೆಲೆ 2 ಕೋಟಿ ರೂಪಾಯಿಯಾಗಿದೆ.

ಇದನ್ನೂ ಓದಿ: ದೆಹಲಿ ಹಿರಿಯ ನಾಗರಿಕರಿಗೆ ಅಯೋಧ್ಯೆಗೆ ಉಚಿತ ಪ್ರವಾಸ: ಕೇಜ್ರಿವಾಲ್ ಘೋಷಣೆ

ಇದರಲ್ಲಿ ಕುಳಿತರೆ ನಿಜವಾಗಿಯೂ ವಿಮಾನದಲ್ಲಿಯೇ ಪ್ರಯಾಣಿಸಿದಂತೆ ಭಾಸವಾಗುತ್ತದೆ. ಅಲ್ಲದೇ, ಇಲ್ಲಿ ವೇಟರ್​, ಸರ್ವರ್​ಗಳು ಗಗನಸಖಿಯರಂತೆ ದಿರಿಸು ಧರಿಸಿರುತ್ತಾರೆ. ರೆಸ್ಟೋರೆಂಟ್​ನಲ್ಲಿ ಪಂಜಾಬಿ, ಚೈನೀಸ್, ಕಾಂಟಿನೆಂಟಲ್, ಇಟಾಲಿಯನ್, ಮೆಕ್ಸಿಕನ್​, ಥಾಯ್​​​ ಫುಡ್​ ಲಭ್ಯವಿರುತ್ತದೆ ಎಂದು ರೆಸ್ಟೋರೆಂಟ್ ವ್ಯವಸ್ಥಾಪಕ ನಿರ್ದೇಶಕ ಮುಖಿ ಹೇಳಿದರು.

Last Updated : Oct 28, 2021, 9:23 AM IST

ABOUT THE AUTHOR

...view details