ಕರ್ನಾಟಕ

karnataka

ETV Bharat / bharat

ಶಿರಡಿಯಲ್ಲಿ ಟ್ರಕ್​- ರಿಕ್ಷಾ ನಡುವೆ ಭೀಕರ ಅಪಘಾತ: 6 ಮಂದಿ ದುರ್ಮರಣ - ಮಹಾರಾಷ್ಟ್ರದಲ್ಲಿ ಭೀಕರ ರಸ್ತೆ ಅಪಘಾತ

ಇಂದು ಬೆಳಗ್ಗೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಶಾಲಾ ವಿದ್ಯಾರ್ಥಿಗಳು ಸೇರಿದಂತೆ ಆರು ಮಂದಿ ಸಾವಿಗೀಡಾದರು.

truck-rickshaw accident
truck-rickshaw accident

By

Published : May 6, 2022, 1:09 PM IST

ಶಿರಡಿ(ಮಹಾರಾಷ್ಟ್ರ):ಟ್ರಕ್​​-ರಿಕ್ಷಾ ನಡುವೆ ನಡೆದ ರಸ್ತೆ ಅಪಘಾತದಲ್ಲಿ ಇಬ್ಬರು ಕಾಲೇಜು​ ವಿದ್ಯಾರ್ಥಿಗಳು ಸೇರಿದಂತೆ ಆರು ಮಂದಿ ದುರ್ಮರಣಕ್ಕೀಡಾಗಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮಹಾರಾಷ್ಟ್ರದ ಅಹಮದ್​​ನಗರದ ಶಿರಡಿಯಲ್ಲಿ ದುರ್ಘಟನೆ ನಡೆದಿದೆ.


ಸಾವೀಗೀಡಾದವರಲ್ಲಿ ಇಬ್ಬರು ಕಾಲೇಜು ವಿದ್ಯಾರ್ಥಿಗಳು, ಇಬ್ಬರು ಮಹಿಳೆಯರು ಮತ್ತು ಮತ್ತಿಬ್ಬರು ಪುರುಷರು ಸೇರಿದ್ದಾರೆ. ನಾಲ್ವರು ಗಂಭೀರ ಗಾಯಗೊಂಡಿದ್ದಾರೆ. ಘಟನಾ ಸ್ಥಳಕ್ಕೆ ಕೋಪರಗಾಂವ್ ಗ್ರಾಮಾಂತರ ಠಾಣೆಯ ಪೊಲೀಸ್ ಇನ್ಸ್​​ಪೆಕ್ಟರ್​​ ಭೇಟಿ ನೀಡಿದ್ದು, ಗಾಯಾಳುಗಳನ್ನು ಕೋಪರಗಾಂವ್ ಗ್ರಾಮಾಂತರ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ:'ವಿಜ್ಞಾನ ಸುಳ್ಳು ಹೇಳಲ್ಲ,ಮೋದಿ ಹೇಳ್ತಾರೆ': ಕೋವಿಡ್ ಸಾವಿನ ವಿಚಾರವಾಗಿ ರಾಹುಲ್ ವಾಗ್ದಾಳಿ

ಬೆಳಗ್ಗೆ 8.30ರಿಂದ 9ರ ನಡುವೆ ಘಟನೆ ಸಂಭವಿಸಿದೆ. ಅಪಘಾತದ ತೀವ್ರತೆಗೆ ರಿಕ್ಷಾ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಕೋಪರ್‌ಗಾಂವ್‌ನಿಂದ ಬಂದ ಕಂಟೈನರ್ ಪ್ರಯಾಣಿಕರನ್ನು ಸಾಗಿಸುತ್ತಿದ್ದ ರಿಕ್ಷಾಕ್ಕೆ ಡಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ.

ABOUT THE AUTHOR

...view details