ಹೈದರಾಬಾದ್(ತೆಲಂಗಾಣ): ಕಾಂಗ್ರೆಸ್ ಪಕ್ಷದ ಮುಖಂಡ ರಾಹುಲ್ ಗಾಂಧಿ ತೆಲಂಗಾಣ ಪ್ರವಾಸ ಕೈಗೊಂಡು ಇಲ್ಲಿನ ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಿದ್ದಾರೆ ಎಂಬ ಮಾತು ಕೇಳಿ ಬಂದಿದೆ. ಆದರೆ, ಇದಕ್ಕೆ ಉಸ್ಮಾನಿಯಾ ವಿವಿ ಹಾಗೂ ತೆಲಂಗಾಣ ಹೈಕೋರ್ಟ್ ಅನುಮತಿ ನೀಡಿಲ್ಲ. ಇದರ ಬೆನ್ನಲ್ಲೇ ಅವರನ್ನ ವಿರೋಧಿಸುವ ಕೆಲವೊಂದು ಬ್ಯಾನರ್ಗಳು ನಗರದಲ್ಲಿ ರಾರಾಜಿಸಲು ಶುರು ಮಾಡಿವೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇತ್ತಿಚೇಗೆ ನೇಪಾಳದಲ್ಲಿ ನಡೆದ ನೈಟ್ ಪಾರ್ಟಿಯಲ್ಲಿ ಎಂಜಾಯ್ ಮಾಡುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದೇ ವಿಚಾರವನ್ನಿಟ್ಟುಕೊಂಡು ರಾಹುಲ್ ಗಾಂಧಿ ಕಾಲೆಳೆಯಲಾಗಿದ್ದು, 'ರಾಹುಲ್ ಜೀ... ನೀವು ವೈಟ್ ಚಾಲೆಂಜ್ಗೆ ಸಿದ್ಧರಿದ್ದೀರಾ? ಎಂದು ಪ್ರಶ್ನೆ ಮಾಡ್ತಿರುವ ಕೆಲವೊಂದು ಬ್ಯಾನರ್ ನಗರದ ವಿವಿಧ ಸ್ಥಳಗಳಲ್ಲಿ ಹಾಕಲಾಗಿದೆ.
ರಾಹುಲ್ ಗಾಂಧಿಗೆ ವೈಟ್ ಚಾಲೆಂಜ್ ಇದನ್ನೂ ಓದಿ:ಬಿಹಾರ ಸುಧಾರಣೆಗೋಸ್ಕರ 3 ಸಾವಿರ ಕಿ.ಮೀ ಪಾದಯಾತ್ರೆ: ಚುನಾವಣಾ ಚಾಣಕ್ಯ ಪ್ರಶಾಂತ್ ಕಿಶೋರ್ ಘೋಷಣೆ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತೆಲಂಗಾಣ ಪ್ರವಾಸ ಆರಂಭಗೊಳ್ಳುವುದಕ್ಕೂ ಮುಂಚಿತವಾಗಿ ಈ ಫ್ಲೆಕ್ಸ್ಗಳು ಸಂಚಲನ ಮೂಡಿಸಲು ಶುರುವಾಗಿವೆ.
ಏನಿದು ವೈಟ್ ಚಾಲೆಂಜ್?: ಈ ಹಿಂದೆ ತೆಲಂಗಾಣದಲ್ಲಿ ಟಾಲಿವುಡ್ ಡ್ರಗ್ಸ್ ಪ್ರಕರಣದ ಸಂದರ್ಭದಲ್ಲಿ ವೈಟ್ ಚಾಲೆಂಜ್ ಸಿಕ್ಕಾಪಟ್ಟೆ ಮುನ್ನೆಲೆಗೆ ಬಂದಿತ್ತು. ಈ ವೇಳೆ, ಕಾಂಗ್ರೆಸ್ ಹಾಗೂ ಟಿಆರ್ಎಸ್ ಪಕ್ಷಗಳ ಮುಖಂಡರು ಪರಸ್ಪರ ಸವಾಲು ಹಾಕಿದ್ದರು. ಡ್ರಗ್ಸ್ ಪ್ರಕರಣದಿಂದ ಹಲವಾರು ಆರೋಪಿಗಳ ರಕ್ಷಣೆ ಮಾಡಲು ಟಿಆರ್ಎಸ್ ನಾಯಕರು ಪ್ರಯತ್ನಿಸುತ್ತಿದ್ದಾರೆಂದು ತೆಲಂಗಾಣ ಕಾಂಗ್ರೆಸ್ ಅಧ್ಯಕ್ಷ ರೇವಂತ್ ರೆಡ್ಡಿ ಆರೋಪ ಮಾಡಿದ್ದರು. ಇದರ ಬೆನ್ನಲ್ಲೇ ನೀವು ತಪ್ಪು ಮಾಡಿಲ್ಲ ಎಂದರೆ ನಾರ್ಕೊಟಿಕ್ ಟೆಸ್ಟ್ ಮಾಡಿಸಿಕೊಳ್ಳುವಂತೆ ಸವಾಲು ಹಾಕಿದ್ದರು.
ಸಚಿವ ಕೆಟಿಆರ್ ಹಾಗೂ ಮಾಜಿ ಸಂಸದ ಕೊಂಡ ವಿಶ್ವೇಶ್ವರ್ ರೆಡ್ಡಿಗೆ ರೇವಂತ್ ರೆಡ್ಡಿ ಚಾಲೆಂಜ್ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಕೆಟಿಆರ್, ತಾವು ಯಾವುದೇ ಪರೀಕ್ಷೆಗೆ ಸಿದ್ಧ, ದೆಹಲಿ ಏಮ್ಸ್ಗೆ ಬರುತ್ತೇನೆ. ಆದರೆ, ಈ ಸವಾಲಿನಲ್ಲಿ ರಾಹುಲ್ ಗಾಂಧಿ ಭಾಗಿಯಾಗಬೇಕೆಂದು ತಿರುಗೇಟು ನೀಡಿದ್ದರು. ಈ ಸಂದರ್ಭದಲ್ಲಿ ವೈಟ್ ಚಾಲೆಂಜ್ ಎಂಬ ಪದ ಬಳಿಕೆ ಮಾಡಲಾಗಿತ್ತು.