ಕರ್ನಾಟಕ

karnataka

ETV Bharat / bharat

ಭಾರಿ ಹಿಮಪಾತಕ್ಕೆ ಇಬ್ಬರು ಕಾರ್ಮಿಕರು ಜೀವಂತ ಸಮಾಧಿ... - Sona Marg area of Ganderbal district

ಹಿಮಕುಸಿತದಿಂದ ಕಾರ್ಮಿಕರಿಬ್ಬರು ಸಾವನ್ನಪ್ಪಿದ್ದು, ಉಳಿದ ಕಾರ್ಮಿಕರನ್ನು ಅಲ್ಲಿನ ಜಿಲ್ಲಾಡಳಿತವು ಸುರಕ್ಷಿತ ಸ್ಥಳಗಳಿಗೆ ಕಳುಹಿಸಿದೆ.

heavy snowfall
ಭಾರಿ ಹಿಮಪಾತ

By

Published : Jan 14, 2023, 12:39 PM IST

ಗಂದೇರ್​ಬಾಲ್(ಜಮ್ಮು ಮತ್ತು ಕಾಶ್ಮೀರ): ಜಮ್ಮು ಮತ್ತು ಕಾಶ್ಮೀರದ ಗಂದೇರ್​ಬಾಲ್​ ಜಿಲ್ಲೆಯ ಸೋನಾ ಮಾರ್ಗ ಪ್ರದೇಶದಲ್ಲಿ ಶುಕ್ರವಾರ ಉಂಟಾದ ಹಿಮಪಾತದಲ್ಲಿ ಸಿಲುಕಿದ ಇಬ್ಬರು ಕಾರ್ಮಿಕರು ಜೀವಂತ ಸಮಾಧಿಯಾಗಿದ್ದಾರೆ. ಜಿಲ್ಲಾಡಳಿತ ಕಾರ್ಯಾಚರಣೆ ಆರಂಭಿಸಿದ್ದು, ಕಾರ್ಮಿಕರ ಮೃತದೇಹವನ್ನು ಹಿಮದಿಂದ ಹೊರತೆಗೆದಿದೆ. ಬಳಿಕ ಹೆಚ್ಚಿನ ಹಿಮಪಾತದ ಮುನ್ಸೂಚನೆಯಿಂದಾಗಿ ಜಿಲ್ಲಾಡಳಿತವು ಉಳಿದ ಕಾರ್ಮಿಕರನ್ನು ಗಂಗೀರ್​ನ ಸುರಕ್ಷಿತ ಸ್ಥಳಗಳಿಗೆ ಕಳುಹಿಸಿದ್ದಾರೆ.

ಹವಾಮಾನ ಇಲಾಖೆಯ ಮುನ್ಸೂಚನೆಯಂತೆ, ಕಾಶ್ಮೀರದ ಗಂದೇರ್‌ಬಾಲ್ ಜಿಲ್ಲೆಯಲ್ಲಿ ಶುಕ್ರವಾರ ಬೆಳಿಗ್ಗೆಯಿಂದಲೇ ಹಿಮಪಾತ ಆರಂಭವಾಗಿದೆ. ಜಿಲ್ಲೆಯ ಬಯಲು ಪ್ರದೇಶಗಳಲ್ಲಿ ಸಾಧಾರಣ ಹಿಮಪಾತವಾಗಿದ್ದು, ಉಳಿದ ಪ್ರದೇಶಗಳಲ್ಲಿ ಭಾರೀ ಹಿಮಕುಸಿತವಾಗಿದೆ. ಜಿಲ್ಲಾಡಳಿತವು ಅಲ್ಲಿನ ರಸ್ತೆಗಳಲ್ಲಿನ ಹಿಮವನ್ನು ತೆಗೆದುಹಾಕುವಲ್ಲಿ ನಿರತವಾಗಿದೆ. ಅಲ್ಲದೇ ಈ ಪ್ರದೇಶದ ಜನರು ಹಿಮಪಾತದಿಂದಾಗಿ ವಿವಿಧ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

ಇದನ್ನೂ ಓದಿ:ಭಾರಿ ಹಿಮಪಾತ: ಜಮ್ಮು-ಶ್ರೀನಗರ ಹೆದ್ದಾರಿ ಬಂದ್​

ಹಿಮಪಾತದಿಂದ ವಿಮಾನ ಹಾರಾಟ ರದ್ದು:ಜಮ್ಮು ಮತ್ತು ಕಾಶ್ಮೀರ ಹಾಗೂ ಹಿಮಾಚಲ ಪ್ರದೇಶದಲ್ಲಿ ಭಾರಿ ಹಿಮಪಾತ ಸಂಭವಿಸುತ್ತಿದೆ. ಕಾಶ್ಮೀರ ಕಣಿವೆಯಲ್ಲಿ ಹಿಮಪಾತದ ನಡುವೆ ಕೆಟ್ಟ ಹವಾಮಾನದ ಕಾರಣದಿಂದಾಗಿ ಶ್ರೀನಗರ ವಿಮಾನ ನಿಲ್ದಾಣದಲ್ಲಿ ಶುಕ್ರವಾರ 25 ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ. ಶ್ರೀನಗರ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಬೆಳಗ್ಗೆ 10ರಿಂದಲೇ ವಿಮಾನ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ. ಏರ್‌ ಏಷ್ಯಾ, ಇಂಡಿಗೋ, ಸ್ಪೈಸ್‌ ಜೆಟ್, ಏರ್ ಇಂಡಿಯಾ ಮತ್ತು ವಿಸ್ತಾರಾ ಸಂಸ್ಥೆ ಸೇರಿದಂತೆ 25 ವಿಮಾನಗಳನ್ನು ರದ್ದುಗೊಳಿಸಲಾಗಿದೆ. ಇತ್ತ, ರಾಂಬನ್ ಜಿಲ್ಲೆಯ ಮೆಹರ್ ಪ್ರದೇಶದಲ್ಲಿ ಭೂಕುಸಿತದಿಂದಾಗಿ ಶ್ರೀನಗರ ಮತ್ತು ಜಮ್ಮು ಹೆದ್ದಾರಿಯಲ್ಲಿ ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.

ಹಿಮದಲ್ಲಿ ಪ್ರವಾಸಿಗರ ಮೋಜು-ಮಸ್ತಿ:ಪ್ರವಾಸಿಗರು ಬಹಳ ಸಮಯದಿಂದ ಹಿಮಪಾತಕ್ಕಾಗಿಯೇ ಕಾಯುತ್ತಿದ್ದರು. ಇದೀಗ ಹಿಮಪಾತದಿಂದಾಗಿ ಪ್ರವಾಸಿಗರ ಮುಖದಲ್ಲೂ ಸಂತಸ ಅರಳಿದೆ. ಶುಕ್ರವಾರ ಬೆಳಿಗ್ಗೆಯಿಂದಲೇ ಹೊರ ರಾಜ್ಯಗಳ ಪ್ರವಾಸಿಗರು ಶಿಮ್ಲಾದತ್ತ ಮುಖ ಮಾಡುತ್ತಿದ್ದಾರೆ. ಜೊತೆಗೆ ಪ್ರವಾಸಿಗರು ಹಿಮದೊಂದಿಗೆ ಆಟವಾಡುತ್ತಾ, ಮೋಜಿನಲ್ಲಿ ತೊಡಗಿರುವುದು ಕಂಡು ಬರುತ್ತಿದೆ.

ಹೈದರಾಬಾದ್‌ನಲ್ಲಿ ಮೈ ನಡುಗುವ ಚಳಿ:ರಾಜ್ಯದಲ್ಲಿ ಕಳೆದ ನಾಲ್ಕೈದು ದಿನಗಳಿಂದ ಚಳಿ ತುಸು ಹೆಚ್ಚಾಗಿದೆ. ಈಶಾನ್ಯ ಭಾರತದಿಂದ ಕಡಿಮೆ ಒತ್ತಡದ ಗಾಳಿ ಬೀಸುತ್ತಿರುವ ಕಾರಣ ತೆಲಂಗಾಣದಲ್ಲಿ ತಂಪಾದ ವಾತಾವರಣ ಉಂಟಾಗಿದೆ. ಚಳಿ ತೀವ್ರಗೊಂಡಿರುವ ಕಾರಣಕ್ಕೆ ಜನರು ಬಿಸಿ ಬಿಸಿ ಪಾನೀಯದ ಮೊರೆ ಹೋಗುತ್ತಿದ್ದಾರೆ.

ಇದನ್ನೂ ಓದಿ:ಮಕರ ಸಂಕ್ರಾಂತಿ ಸಂಭ್ರಮ... ಹಬ್ಬದ ವಿಶೇಷತೆ ಹೆಚ್ಚಿಸುವ ಆರೋಗ್ಯಕರ ಆಹಾರ ಪದಾರ್ಥಗಳು ಯಾವವು ಗೊತ್ತಾ?

ABOUT THE AUTHOR

...view details