ಬೆರ್ಹಾಂಪುರ,ಒಡಿಶಾ :ಪ್ರಕೃತಿಯ ವಿಸ್ಮಯಗಳು ಒಂದೆರೆಡಲ್ಲ. ಪ್ರಾಣಿಗಳು ಮತ್ತು ಪಕ್ಷಿಗಳು ಬದುಕು ಕೆಲವೊಮ್ಮೆ ನಿಗೂಢ ಮತ್ತು ಅಚ್ಚರಿ ಉಂಟು ಮಾಡುತ್ತದೆ. ಅಳಿವಿನಂಚಿನಲ್ಲಿರುವ ಕಡಲಾಮೆಗಳಾದ ಆಲಿವ್ ರಿಡ್ಲೆ ಆಮೆಗಳು ಗರ್ಹಿಮತಾಗೆ ಅಭಯಾರಣ್ಯಕ್ಕೆ ಆಗಮಿಸಿ, ಮೊಟ್ಟೆಯಿಡುವ ಕಾರ್ಯದಲ್ಲಿ ತೊಡಗಿಕೊಂಡಿವೆ. ಸುಮಾರು ಮೂರು ದಿನಗಳಿಂದ ಈ ಪ್ರಕ್ರಿಯೆ ಆರಂಭವಾಗಿದ್ದು, ಇನ್ನೂ ಕೆಲವು ದಿನಗಳ ಕಾಲ ಮುಂದುವರೆಯಲಿದೆ.
ಸುಮಾರು 5 ಲಕ್ಷ ಆಲಿವ್ ರಿಡ್ಲಿ ಆಮೆಗಳು ಒಡಿಶಾದ ಕೇಂದ್ರಪಾರ ಜಿಲ್ಲೆಯ ಗಹಿರ್ಮತಾ ಸಮುದ್ರ ಅಭಯಾರಣ್ಯ ಸುಮಾರು 100 ಕಿಲೋಮೀಟರ್ ದೂರದಲ್ಲಿ ರುಶಿಕುಲ್ಯದ ಗೋಖರ್ಕುಡ ಮತ್ತು ಪೊಡಂಪೇಟಾ ದ್ವೀಪಕ್ಕೆ ಆಗಮಿಸಿವೆ. ಮಾರ್ಚ್ 25ರಂದು 2.4 ಲಕ್ಷ ಆಮೆಗಳು, ಮಾರ್ಚ್ 26ರಂದು 1.85 ಲಕ್ಷ ಆಮೆಗಳು, ಮಾರ್ಚ್ 27ರಂದು 65,000 ಆಮೆಗಳು ಮೊಟ್ಟೆಯಿಡಲು ದ್ವೀಪ ಪ್ರದೇಶಕ್ಕೆ ಬಂದಿವೆ. ಈ ಪ್ರಕ್ರಿಯೆಯು ಇನ್ನೂ ನಾಲ್ಕೈದು ದಿನಗಳವರೆಗೆ ಮುಂದುವರಿಯುತ್ತದೆ ಎನ್ನಲಾಗುತ್ತಿದೆ.