ನವದೆಹಲಿ: ಅಫ್ಘಾನಿಸ್ತಾನದಲ್ಲಿ ಸಿಲುಕಿರುವ ಹಿಂದೂ ಮತ್ತು ಸಿಖ್ಖರಿಗೆ ಇ-ವೀಸಾಗಳನ್ನು ನೀಡಿ, ಅವರನ್ನು ಸ್ಥಳಾಂತರಿಸಲು ಅನುಕೂಲ ಮಾಡಿಕೊಡುವಂತೆ ಭಾರತದಲ್ಲಿನ ಆಫ್ಘನ್ ಅಲ್ಪಸಂಖ್ಯಾತ ಮುಖಂಡರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದಾರೆ.
ದೆಹಲಿಯ ಗುರುದ್ವಾರ ಗುರುನಾನಕ್ ದರ್ಬಾರಿನ್ ಮನೋಹರ್ ನಗರದಲ್ಲಿ ನಿನ್ನೆ ಭಾರತದಲ್ಲಿನ ಆಫ್ಘನ್ ಅಲ್ಪಸಂಖ್ಯಾತ ಮುಖಂಡರು ತುರ್ತು ಸಭೆ ನಡೆಸಿದ್ದರು. ಮೂಲಗಳ ಪ್ರಕಾರ, ಅಫ್ಘಾನಿಸ್ತಾನದಲ್ಲಿ ಸಿಲುಕಿರುವ ಹಿಂದೂ ಮತ್ತು ಸಿಖ್ ಸಮುದಾಯದ 222 ಮಂದಿಯನ್ನು ಸ್ಥಳಾಂತರಿಸುವ ಕುರಿತು ಚರ್ಚಿಸಲು ಈ ಸಭೆ ಕರೆಯಲಾಗಿತ್ತು.
ಎರಡು ತಿಂಗಳ ಅವಧಿಗೆ 216 ಆಫ್ಘನ್ ನಾಗರಿಕರನ್ನು ಸ್ಥಳಾಂತರಿಸಲು ಇ-ವೀಸಾಗಳನ್ನು ನೀಡುವಂತೆ ಹಾಗೂ ಮಾನ್ಯ ಪ್ರಯಾಣ ದಾಖಲೆಗಳನ್ನು ಹೊಂದಿರದ ಇತರ ಆರು ಜನರಿಗೆ ಅನುಕೂಲ ಕಲ್ಪಿಸುವಂತೆ ಭಾರತ ಸರ್ಕಾರದ ಬಳಿ ಆಫ್ಘನ್ ಅಲ್ಪಸಂಖ್ಯಾತ ಮುಖಂಡರು ವಿನಂತಿಸಿದ್ದಾರೆ.