ಡೆಹ್ರಾಡೂನ್ (ಉತ್ತರಾಖಂಡ):ಕಾಲೇಜಿನ ಹಾಸ್ಟೆಲ್ ಹೊರಗಡೆ ವಿದ್ಯಾರ್ಥಿನಿಯೋರ್ವಳನ್ನು ಗುಂಡಿಕ್ಕಿ ಕೊಂದ ಪಾಗಲ್ ಪ್ರೇಮಿಯನ್ನು ಉತ್ತರಾಖಂಡ ಪೊಲೀಸರು ಬಂಧಿಸಿದ್ದಾರೆ.
ಕೆಲ ದಿನಗಳ ಹಿಂದೆ ಉತ್ತರಾಖಂಡ ರಾಜಧಾನಿ ಡೆಹ್ರಾಡೂನ್ನ ರಾಯ್ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹಾಸ್ಟೆಲ್ನಲ್ಲಿ ವಾಸವಾಗಿದ್ದ ವಿದ್ಯಾರ್ಥಿನಿ ಯಾವುದೋ ಕೆಲಸದ ನಿಮಿತ್ತ ತನ್ನ ಸ್ನೇಹಿತೆಯೊಂದಿಗೆ ಹಾಸ್ಟೆಲ್ನಿಂದ ಹೊರಗೆ ಬಂದಿದ್ದ ವೇಳೆ ಆಕೆ ಮೇಲೆ ಗುಂಡು ಹಾರಿಸಿ ಸ್ನೇಹಿತನೇ ಸಾಯಿಸಿರುವ ಘಟನೆ ನಡೆದಿತ್ತು.
ಮೃತ ಯುವತಿಯನ್ನು ಸಿದ್ಧಾರ್ಥ್ ಇನ್ಸ್ಟಿಟ್ಯೂಟ್ ಆಫ್ ಫಾರ್ಮಸಿ ಕಾಲೇಜಿನಲ್ಲಿ ಮೊದಲ ವರ್ಷದ ಡಿ-ಫಾರ್ಮಾ ಕೋರ್ಸ್ ಮಾಡುತ್ತಿದ್ದ ವಂಶಿಕಾ ಬನ್ಸಾಲ್ (19ವರ್ಷ) ಎಂದು ಗುರುತಿಸಲಾಗಿತ್ತು. ಈಕೆಯ ಹಿಂದೆ ಬಿದ್ದಿದ್ದ ಆದಿತ್ಯ ತೋಮರ್ ತನ್ನ ಪ್ರೇಮ ನಿವೇದನೆಗೆ ಯುವತಿ ಒಪ್ಪದಿದ್ದಾಗ ಈ ಕೃತ್ಯ ಎಸಗಿದ್ದ.
ಇದನ್ನೂ ಓದಿ: ಪ್ರತಿಷ್ಠಿತ ಕಾಲೇಜುಗಳಲ್ಲಿ ಸೀಟು ಕೊಡಿಸುವುದಾಗಿ ವಿದ್ಯಾರ್ಥಿಗಳಿಗೆ ವಂಚನೆ: ಇಬ್ಬರ ಬಂಧನ
ವಂಶಿಕಾ ಹರಿದ್ವಾರ ನಿವಾಸಿಯಾಗಿದ್ದು, ಆರೋಪಿ ಆದಿತ್ಯ ಉತ್ತರಪ್ರದೇಶದ ಶಾಮ್ಲಿ ಜಿಲ್ಲೆಯವನು. ಇಬ್ಬರೂ ಒಂದೇ ತರಗತಿಯಲ್ಲಿ ಓದುತ್ತಿದ್ದರು. ಕೃತ್ಯ ಎಸಗಿದ ಬಳಿಕ ಸ್ಥಳದಿಂದ ಪರಾರಿಯಾಗಿದ್ದ ಆರೋಪಿ ಆದಿತ್ಯನನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.