ಚೆನ್ನೈ (ತಮಿಳುನಾಡು): ಎಐಎಡಿಎಂಕೆ ಶಾಸಕ ಮತ್ತು ಮಾಜಿ ಸಚಿವ ಕೆ.ಸುದರ್ಶನಂ ಹತ್ಯೆಯ 16 ವರ್ಷಗಳ ನಂತರ ಮದ್ರಾಸ್ ಹೈಕೋರ್ಟ್ ಮಂಗಳವಾರ ಜಾಮೀನು ಕೋರಿ ಆರೋಪಿ ಸಲ್ಲಿಸಿರುವ ಮನವಿಯನ್ನು ಆಲಿಸಿದೆ.
16 ವರ್ಷಗಳ ನಂತರ ಜಾಮೀನು ಕೋರಿದ ಎಐಎಡಿಎಂಕೆ ನಾಯಕ ಕೆ.ಸುದರ್ಶನಂ ಕೊಲೆ ಪ್ರಕರಣದ ಆರೋಪಿ - ಎಐಎಡಿಎಂಕೆ ಶಾಸಕ ಮತ್ತು ಮಾಜಿ ಸಚಿವ ಕೆ.ಸುದರ್ಶನಂ ಹತ್ಯೆ ಪ್ರಕರಣ
ಎಐಎಡಿಎಂಕೆ ಶಾಸಕ ಮತ್ತು ಮಾಜಿ ಸಚಿವ ಕೆ.ಸುದರ್ಶನಂ ಅವರನ್ನು 2005ರಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಇದೀಗ ಪ್ರಕರಣದ 16 ವರ್ಷಗಳ ನಂತರ ಜಾಮೀನು ಕೋರಿ ಆರೋಪಿ ಮದ್ರಾಸ್ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.
highcourt
ನ್ಯಾಯಮೂರ್ತಿ ಭಾರತಿ ದಾಸನ್ ನೇತೃತ್ವದ ನ್ಯಾಯಪೀಠವು ಕಳೆದ 16 ವರ್ಷಗಳಿಂದ ಈ ಪ್ರಕರಣ ಇನ್ನೂ ಅಪೂರ್ಣವಾಗಿದೆ ಎಂದು ತಿಳಿದು ಆಚ್ಚರಿ ವ್ಯಕ್ತಪಡಿಸಿದೆ.
ಎಐಎಡಿಎಂಕೆ ನಾಯಕ ಸುದರ್ಶನಂ, ಅವರ ಮಗ ಮತ್ತು ಸೊಸೆಯನ್ನು ಗಂಭೀರವಾಗಿ ಗಾಯಗೊಳಿಸಿದ ಶಸ್ತ್ರಸಜ್ಜಿತ ದರೋಡೆಕೋರರು ನಂತರ ಮನೆಯಿಂದ ನಗದು ಹಾಗೂ ಆಭರಣಗಳನ್ನು ಕಸಿದುಕೊಂಡು ಸುದರ್ಶನಂ ಅವರನ್ನು ಗುಂಡಿಕ್ಕಿ ಕೊಂದಿದ್ದರು.