ಇಂದೋರ್:ವಿದೇಶಿ ಆಮೆಗಳನ್ನು ಕಳ್ಳಸಾಗಣೆ ಮಾಡಿದ ಆರೋಪಿಗಳನ್ನು ಪೊಲೀಸರು ಬಂಧಿಸಿರುವ ಘಟನೆ ನಗರದ ಐಟಿ ಪಾರ್ಕ್ ಬಳಿ ನಡೆದಿದೆ.
ವಿದೇಶಿ ಆಮೆಗಳ ಕಳ್ಳಸಾಗಾಟ.. ಆರೋಪಿ ಬಂಧನ - ಇಂದೋರ್ನಲ್ಲಿ ಎರಡು ವಿದೇಶಿ ಆಮೆಗಳ ಕಳ್ಳಸಾಗಟ
ಎರಡು ವಿದೇಶಿ ಆಮೆಗಳ ಕಳ್ಳ ಸಾಗಾಟ ಮಾಡಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿರುವ ಘಟನೆ ಮಧ್ಯಪ್ರದೇಶದ ಇಂದೋರ್ನಲ್ಲಿ ನಡೆದಿದೆ.
ಎರಡು ವಿದೇಶಿ ಆಮೆಗಳ ಕಳ್ಳಸಾಗಟ
ಆರೋಪಿ ಅನಿಲ್ ಮರಾಠಾ ಭೋಪಾಲ್ನಿಂದ ಎರಡು ಆಸ್ಟ್ರೇಲಿಯಾ ಆಮೆಗಳನ್ನು ತಂದು ಐಟಿ ಪಾರ್ಕ್ ಬಳಿ ಮಾರಾಟ ಮಾಡಲು ಗ್ರಾಹಕರನ್ನು ಹುಡುಕುತ್ತಿದ್ದನು. ಈ ಬಗ್ಗೆ ಪೊಲೀಸರಿಗೆ ಮಾಹಿತಿ ತಿಳಿದಿದ್ದು, ಪೊಲೀಸರು ಕೂಡಲೇ ಸ್ಥಳಕ್ಕೆ ದೌಡಾಯಿಸಿ ಆರೋಪಿ ಅನಿಲ್ ಮರಾಠನನ್ನು ಬಂಧಿಸಿ ಆಮೆಗಳನ್ನು ವಶಕ್ಕೆ ಪಡೆದುಕೊಂಡರು.
ಪೊಲೀಸರು ಆರೋಪಿಯನ್ನು ವಿಚಾರಣೆ ನಡೆಸಿದ್ದಾರೆ. ಭೋಪಾಲ್ನಿಂದ ಆಮೆಗಳನ್ನು ತಂದಿರುವುದಾಗಿ ಹೇಳಿಕೆ ನೀಡಿದ್ದಾನೆ. ವಿಚಾರಣೆ ಬಳಿಕ ಆಮೆಗಳನ್ನು ಮತ್ತು ಆರೋಪಿ ಅನಿಲ್ನನ್ನು ಪೊಲೀಸರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ.