ಚಂಡೀಗಢ, ಪಂಜಾಬ್: ಆಪ್ ಪಕ್ಷ ಈ ಬಾರಿ ಪಂಜಾಬ್ನಲ್ಲಿ ಭರ್ಜರಿ ಜಯಭೇರಿ ಸಾಧಿಸಲಿದೆ ಎಂಬ ಭರವಸೆಯಲ್ಲಿ ಆಪ್ ಪಕ್ಷದ ಕಾರ್ಯಕರ್ತರಿದ್ದಾರೆ. ಪಂಜಾಬ್ನಲ್ಲಿ ಅಧಿಕಾರ ಹಿಡಿಯಲು 59 ಕ್ಷೇತ್ರಗಳಲ್ಲಿ ಜಯಗಳಿಸಿದರೆ, ಬಹುಮತ ಸಿಕ್ಕಂತಾಗುತ್ತದೆ. ಆದರೆ ಆಪ್ ಪಕ್ಷ ಸುಮಾರು 90 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು, ಈ ಬಾರಿ ಅಧಿಕಾರ ಹಿಡಿಯುವುದು ಖಚಿತ ಎಂದು ಹೇಳಲಾಗುತ್ತಿದೆ.
ಆರಂಭಿಕ ಟ್ರೆಂಡ್ನಲ್ಲಿ, ಚುನಾವಣಾ ಆಯೋಗದ ವರದಿಗಳ ಪ್ರಕಾರ ಆಪ್ ಪಕ್ಷ ಬಹುಮತದ ಗಡಿಯನ್ನು ದಾಟಿದೆ.
ದಿಗ್ಗಜರಿಗೆ ಹಿನ್ನಡೆ
ಎರಡನೇ ಸುತ್ತಿನ ಮತ ಎಣಿಕೆಯ ಫಲಿತಾಂಶದ ನಂತರ ಕಾಂಗ್ರೆಸ್‌ನ ನವಜೋತ್ ಸಿಂಗ್ ಸಿಧು, ಶಿರೋಮಣಿ ಅಕಾಲಿದಳದ ಬಿಕ್ರಮ್ ಮಜಿಥಿಯಾ ಅವರು ಪಟಿಯಾಲಾ ವಿಧಾನಸಭಾ ಕ್ಷೇತ್ರದಲ್ಲಿ ಹಿನ್ನಡೆ ಅನುಭವಿಸಿದ್ದಾರೆ.
ಇದನ್ನೂ ಓದಿ:Punjab Result: ಒಂದು ಕಾಲದಲ್ಲಿ ಪಂಜಾಬ್ ಆಳಿದ್ದ ಅಕಾಲಿದಳಕ್ಕೆ ಕೇವಲ ಕೆಲವೇ ಕ್ಷೇತ್ರದಲ್ಲಿ ಮುನ್ನಡೆ
ಪಂಜಾಬ್ ಲೋಕ ಕಾಂಗ್ರೆಸ್ ನಾಯಕ ಮತ್ತು ಪಂಜಾಬ್ ಮಾಜಿ ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್ ಕೂಡಾ ಹಿನ್ನಡೆ ಅನುಭವಿಸುತ್ತಿದ್ದಾರೆ. ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಅವರು ಅಮೃತಸರ ಪೂರ್ವ ಕ್ಷೇತ್ರದಲ್ಲಿ ಹಿನ್ನಡೆಯಲ್ಲಿದ್ದು, ಆಪ್ನ ಜೀವನ್ ಜೋತ್ಬಕೌರ್ ಮುನ್ನಡೆ ಸಾಧಿಸಿದ್ದಾರೆ.
ಚುನಾವಣಾ ಆಯೋಗದ ಮಾಹಿತಿಯಂತೆ ಕಾಂಗ್ರೆಸ್ 12, ಬಿಜೆಪಿ 5 ಕ್ಷೇತ್ರಗಳಲ್ಲಿ ಮಾತ್ರ ಮುನ್ನಡೆ ಸಾಧಿಸಿವೆ.