ಮುಂಬೈ (ಮಹಾರಾಷ್ಟ್ರ): ತಲವಾರ್ನಿಂದ ಹುಟ್ಟುಹಬ್ಬದ ಕೇಕ್ ಕತ್ತರಿಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಘಟನೆಯು ಬೋರಿವಲಿಯ ಎಂಹೆಚ್ಬಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ ಎಂದು ಹೇಳಲಾಗಿದೆ.ಈ ಸಂಬಂಧ ಎಂಎಚ್ಬಿ ಪೊಲೀಸರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮುಂಬೈನಲ್ಲಿ ತಲವಾರ್ನಿಂದ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಣೆ : ಪ್ರಕರಣ ದಾಖಲು
ತಲವಾರ್ನಿಂದ ಹಟ್ಟುಹಬ್ಬದ ಕೇಕ್ ಕತ್ತರಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ಬಗ್ಗೆ ಆರೋಪಿಗಳ ವಿರುದ್ಧ ಮುಂಬೈ ಬೋರಿವಲಿಯ ಎಂಎಚ್ಬಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮುಂಬೈನಲ್ಲಿ ತಲವಾರಿನಿಂದ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಣೆ : ಪ್ರಕರಣ ದಾಖಲು
ಈ ವೈರಲ್ ದೃಶ್ಯದಲ್ಲಿ ಅಕ್ರಮ್ ಶೇಖ್ ಎಂಬ ಯುವಕ ತಲವಾರ್ನಿಂದ ಸುಮಾರು 20 ಕೇಕ್ ಗಳನ್ನು ಕತ್ತರಿಸಿ ಜನರನ್ನು ಭಯಭೀತಗೊಳಿಸಲು ಯತ್ನಿಸಿದ್ದಾನೆ. ಆರೋಪಿ ತನ್ನ ಹುಟ್ಟುಹಬ್ಬವನ್ನು ಸ್ನೇಹಿತರೊಂದಿಗೆ ಆಚರಿಸಿಕೊಂಡಿದ್ದು, ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ. ಸದ್ಯ ಪ್ರಕರಣದ ಸಂಬಂಧ ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಇದನ್ನೂ ಓದಿ :ಚಂಡೀಗಢ ವಿವಿ ವಿಡಿಯೋ ಲೀಕ್: ಆರೋಪಿಗಳು 7 ದಿನ ಪೊಲೀಸ್ ಕಸ್ಟಡಿಗೆ