ಪಿಂಪ್ರಿ ಚಿಂಚ್ವಾಡ್ (ಮಹಾರಾಷ್ಟ್ರ): ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಕಾರೊಂದರ ಚಾಲಕ ಇದ್ದಕ್ಕಿದ್ದಂತೆ ವಾಹನದ ಬಾಗಿಲು ತೆರೆದಿದ್ದಾನೆ. ಆಗ ಅಲ್ಲೇ ಬರುತ್ತಿದ್ದ ದ್ವಿಚಕ್ರ ವಾಹನದಲ್ಲಿದ್ದ ಯುವಕನಿಗೆ ಡೋರ್ ಬಡಿದು ಕೆಳಗೆ ಬಿದ್ದು, ಟ್ರಕ್ನಡಿ ಸಿಲುಕಿ ಮೃತಪಟ್ಟಿರುವ ಘಟನೆ ಪುಣೆಯ ಪಿಂಪ್ರಿ ಚಿಂಚ್ವಾಡ್ನಲ್ಲಿ ಸಂಭವಿಸಿದೆ.
ಈ ಘಟನೆ ನವೆಂಬರ್ 11ರ ಮಧ್ಯಾಹ್ನ 1.30ರ ಸುಮಾರಿಗೆ ನಡೆದಿದ್ದು, ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ರಾಮ್ ಬಾಳಾಸಾಹೇಬ ಬಾಗಲ್ (24) ಮೃತ ಯುವಕ. ಈ ಸಂಬಂಧ ಟ್ರಕ್ ಚಾಲಕ, ಕಾರು ಚಾಲಕ ಹಾಗೂ ದ್ವಿಚಕ್ರ ವಾಹನ ಸವಾರನ ವಿರುದ್ಧ ಪ್ರಕರಣ ದಾಖಲಾಗಿದೆ.