ಕರ್ನಾಟಕ

karnataka

By

Published : Feb 16, 2021, 11:05 AM IST

ETV Bharat / bharat

ಮತ್ತೆ ನಾಲ್ವರ ಮೃತದೇಹ ಪತ್ತೆ.. ಚಮೋಲಿ ದುರಂತದಲ್ಲಿ ಬಲಿಯಾದವರ ಸಂಖ್ಯೆ 58ಕ್ಕೆ ಏರಿಕೆ

ತಪೋವನ ಸುರಂಗ, ರೇನಿ ಗ್ರಾಮ ಸೇರಿ ಚಮೋಲಿಯಲ್ಲಿ ಈವರೆಗೆ ಒಟ್ಟು 58 ಮೃತದೇಹಗಳು ಪತ್ತೆಯಾಗಿದ್ದು, ಸುಮಾರು 170 ಮಂದಿ ನಾಪತ್ತೆಯಾಗಿದ್ದಾರೆ.

Uttarakhand glacial burst
ಚಮೋಲಿ ದುರಂತ

ಚಮೋಲಿ (ಉತ್ತರಾಖಂಡ): ಫೆಬ್ರವರಿ 7ರಂದು ಉತ್ತರಾಖಂಡದ ಚಮೋಲಿಯಲ್ಲಿ ನೀರ್ಗಲ್ಲು ಸ್ಫೋಟದಿಂದ ಉಂಟಾದ ಪ್ರವಾಹದಲ್ಲಿ ಸಾವನ್ನಪ್ಪಿದವರ ಸಂಖ್ಯೆ 58ಕ್ಕೆ ಏರಿಕೆಯಾಗಿದೆ.

ಐಟಿಬಿಪಿ, ಎನ್​ಡಿಆರ್​ಎಫ್​, ಎಸ್​ಡಿಆರ್​ಎಫ್​ ತಂಡಗಳು ವಿವಿಧ ಇಲಾಖೆಗಳ ಇಂಜಿನಿಯರ್‌ಗಳು, ಅಧಿಕಾರಿಗಳು, ಭೂವಿಜ್ಞಾನಿಗಳು, ವಿಜ್ಞಾನಿಗಳು ಸೇರಿ ಒಟ್ಟು 325ಕ್ಕೂ ಹೆಚ್ಚು ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.

ಇದನ್ನೂ ಓದಿ: ದೆಹಲಿಗರ ನಿದ್ದೆಕೆಡಿಸಿದ 500 ಕಿ.ಮೀ. ದೂರದಲ್ಲಿನ ಉತ್ತರಾಖಂಡ ನೀರ್ಗಲ್ಲು ಪ್ರವಾಹ!

ಜೋಶಿಮಠದ ತಪೋವನ ಸುರಂಗ, ರೇನಿ ಗ್ರಾಮ ಸೇರಿ ಚಮೋಲಿಯಲ್ಲಿ ಈವರೆಗೆ ಒಟ್ಟು 58 ಮೃತದೇಹಗಳು ಪತ್ತೆಯಾಗಿದ್ದು, ಸುಮಾರು 170 ಮಂದಿ ನಾಪತ್ತೆಯಾಗಿದ್ದಾರೆ.

ABOUT THE AUTHOR

...view details