ಕರ್ನಾಟಕ

karnataka

ETV Bharat / bharat

ರಾತ್ರೋರಾತ್ರಿ ಖಾಲಿಯಾಗಿತ್ತು ಒಂದಿಡೀ ಗ್ರಾಮ: ದಿವಾನ್​ ದೌರ್ಜನ್ಯದ ವಿರುದ್ಧ ಜನರ ಶಾಪಕ್ಕೆ ವಿರ್ನಾಮ!

ಗ್ರಾಮವನ್ನು ಸ್ಥಾಪಿಸಿದ ವ್ಯಕ್ತಿಯ ಹೆಸರಿನಲ್ಲಿಯೇ ಆ ಗ್ರಾಮಗಳನ್ನು ಕರೆಯಲಾಯಿತು. ಕುಲ್​ಧರ ಗ್ರಾಮವನ್ನು ಕುಲ್ಧರ್ ಸ್ಥಾಪಿಸಿದರು. ಅದರಲ್ಲಿ ಇತರ ಜಾತಿಯ ಜನರು ಕೂಡಾ ಇದ್ದರು. ಆದರೆ ಈ ಪ್ರದೇಶವನ್ನಾಳಿದ ರಾಜರ ಆಳ್ವಿಕೆಯ ಕಿರುಕುಳದಿಂದಾಗಿ ಜನ ವಲಸೆ ಹೋಗಬೇಕಾಯಿತು.

A story of Rajastan's cursed village
ದಿವಾನ್​ ಆಡಳಿತದಲ್ಲಿ ಬೇಸತ್ತು ಶಾಪ ಪಡೆದ ಗ್ರಾಮ

By

Published : Jul 12, 2021, 6:03 AM IST

ಜೈಪುರ (ರಾಜಸ್ಥಾನ): ರಾಜಸ್ಥಾನದ ಜೈಸಲ್ಮೇರ್ ಜಿಲ್ಲೆಯಿಂದ ಸುಮಾರು 18 ಕಿ.ಮೀ ದೂರದಲ್ಲಿರುವ ಕುಲ್​ಧರ ಗ್ರಾಮವು ವರ್ಷಗಳಿಂದ ನಿರ್ಜನವಾಗಿದೆ. ಮಾನವ ಸಮುದಾಯ ಇಲ್ಲಿ ವಾಸವಾಗಿತ್ತು ಎಂಬ ಕುರುಹುಗಳು ಮಾತ್ರ ಈಗ ಕಾಣಸಿಗುತ್ತವೆ.

ರಾತ್ರೋರಾತ್ರಿ ಖಾಲಿಯಾಗಿತ್ತು ಒಂದಿಡೀ ಗ್ರಾಮ

ಕುಲ್​​​ಧರ ಸಿಂಧೂ ಕಣಿವೆ ನಾಗರಿಕತೆಯ ಜೀವಂತ ಉದಾಹರಣೆ. ಇದರ ವಾಸ್ತುಶಿಲ್ಪ ವಿಶಿಷ್ಟವಾಗಿದ್ದು, ಬೀದಿಗಳು ಉತ್ತರದಿಂದ ದಕ್ಷಿಣಕ್ಕಿವೆ. ಏಕೆಂದರೆ ಜೈಸಲ್ಮೇರ್‌ನಲ್ಲಿ ಚಳಿಗಾಲದಲ್ಲಿ ಉತ್ತರದಿಂದ ದಕ್ಷಿಣಕ್ಕೆ ಮತ್ತು ಬೇಸಿಗೆಯಲ್ಲಿ ದಕ್ಷಿಣದಿಂದ ಉತ್ತರಕ್ಕೆ ಗಾಳಿ ಬೀಸುತ್ತದೆ. ಅಲ್ಲದೆ ಈ ಗ್ರಾಮವನ್ನು ಪಾಲಿವಾಲ್ ಬ್ರಾಹ್ಮಣರು ಈ ಸ್ಥಾಪಿಸಿದ್ದರು ಎನ್ನಲಾಗುತ್ತದೆ.

ಗ್ರಾಮವನ್ನು ಸ್ಥಾಪಿಸಿದ ವ್ಯಕ್ತಿಯ ಹೆಸರಿನಲ್ಲಿ ಗ್ರಾಮಗಳನ್ನು ಕರೆಯಲಾಯಿತು. ಕುಲ್​ಧರ ಗ್ರಾಮವನ್ನು ಕುಲ್ಧರ್ ಸ್ಥಾಪಿಸಿದರು. ಅದರಲ್ಲಿ ಇತರ ಜಾತಿಯ ಜನರು ಕೂಡ ಇದ್ದರು. 84 ಗ್ರಾಮಗಳು ಪಾಲಿವಾಲ್ಸ್ ಹೆಸರಿನಲ್ಲಿವೆ. ಅಚ್ಚರಿಯ ಸಂಗತಿ ಎಂದರೆ, ಒಂದೇ ರಾತ್ರಿಯಲ್ಲಿ ಕುಲ್​​ಧರ ಸೇರಿದಂತೆ 84 ಗ್ರಾಮಗಳನ್ನು ಖಾಲಿ ಮಾಡಲಾಯಿತು.

ಏಕೆಂದರೆ ಈ ನೆಲೆ ಆಳುತ್ತಿದ್ದ ರಾಜರ ಆಸ್ಥಾನದಲ್ಲಿದ್ದ ದಿವಾನ್​​ ಸಲಾಮ್ ಸಿಂಗ್ ತುಂಬಾ ಕ್ರೂರಿಯಾಗಿದ್ದ, ಜೊತೆಗೆ ನಿರಂಕುಶಾಧಿಕಾರಿಯಾಗಿದ್ದ. ಈ ನಡುವೆಯೇ ಜೈಸಲ್ಮೇರ್ ಮತ್ತು ಬಿಕಾನೆರ್ ನಡುವೆ ಯುದ್ಧ ನಡೆದಿತ್ತು ಎಂದು ಇತಿಹಾಸಕಾರರು ಹೇಳುತ್ತಾರೆ. ನಂತರ ಆರ್ಥಿಕ ಬಿಕ್ಕಟ್ಟು ಸಹ ಈ ಗ್ರಾಮಕ್ಕೆ ಶಾಪವಾಗಿ ಎದುರಾಗಿತ್ತು. ಸಲಾಮ್ ಸಿಂಗ್​​ ಪಾಲಿವಾಲ್‌ಗಳಿಗೆ ಕಿರುಕುಳ ನೀಡಲು ಪ್ರಾರಂಭಿಸಿದ್ದ. ಯುದ್ಧದಲ್ಲಿಯೂ ಪ್ರಾಣ ಮತ್ತು ಆಸ್ತಿಪಾಸ್ತಿ ನಷ್ಟವಾಗಿತ್ತು.

ಹೀಗಾಗಿ ಇಡೀ ಗ್ರಾಮಸ್ಥರು ಸೇರಿ ಒಂದೇ ದಿನ ಗ್ರಾಮವನ್ನು ತೊರೆಯುವುದು ಉತ್ತಮ ಎಂದು ನಿರ್ಧರಿಸಿದ್ದರು. ಜೈಸಲ್ಮೇರ್ ರಾಜಪ್ರಭುತ್ವದಲ್ಲಿ ನಾವು ವಾಸಿಸಬೇಕಾಗಿಲ್ಲ ಎಂದು ಸಂಜೆಯ ಹೊತ್ತಿಗೆ 84 ಹಳ್ಳಿಗಳಿಗೆ ಈ ಸಂದೇಶ ಕಳುಹಿಸಿ ಅಲ್ಲಿಂದ ರಾತ್ರೋರಾತ್ರಿ ಹೊರನಡೆದರು. ಆದರೆ ಹೀಗೆ ಹೊರಹೋಗುವ ಮುನ್ನ ಈ ಜನ ಗ್ರಾಮಕ್ಕೆ ಶಾಪ ಹಾಕಿದ್ದರಂತೆ. ಹೀಗಾಗಿ ಇಂದಿಗೂ ಈ ಸ್ಥಳದಲ್ಲಿ ಯಾರೊಬ್ಬರೂ ನೆಲೆ ನಿಲ್ಲಲು ಸಾಧ್ಯವಾಗಿಲ್ಲ ಎನ್ನುತ್ತಾರೆ ಇಲ್ಲಿನ ಹಿರಿಯರು.

ABOUT THE AUTHOR

...view details