ನವದೆಹಲಿ:ಉಕ್ರೇನ್ ಯುದ್ಧದಲ್ಲಿ ಸಿಲುಕಿ ನಲಗುತ್ತಿರುವ ಭಾರತೀಯರ ಸ್ಥಳಾಂತರ ಮುಂದುವರೆದಿದೆ. ಈಗಾಗಲೇ 16 ಸಾವಿರಕ್ಕೂ ಹೆಚ್ಚು ಭಾರತೀಯರನ್ನು ಸರ್ಕಾರ ಉಕ್ರೇನ್ನಿಂದ ಸ್ಥಳಾಂತರ ಮಾಡಿದೆ. ಇನ್ನೂ ಸಾವಿರಾರು ಜನ ಯುದ್ಧಪೀಡಿತ ಉಕ್ರೇನ್ನಲ್ಲಿ ಸಿಲುಕಿ ಒದ್ದಾಡುತ್ತಿದ್ದಾರೆ. ಅವರ ಸ್ಥಳಾಂತರಕ್ಕೆ ಭಾರತೀಯ ವಿದೇಶಾಂಗ ಇಲಾಖೆ ಹಾಗೂ ಉಕ್ರೇನ್ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಹರಸಾಹಸ ಮುಂದುವರೆಸಿದೆ.
ಈ ನಡುವೆ ಹಂಗೇರಿಯ ಬುಡಾಪೇಸ್ಟ್ನಿಂದ ಭಾರತೀಯರನ್ನು ಹೊತ್ತ ವಿಶೇಷ ವಿಮಾನ ಇಂದು ನಸುಕಿನ ಜಾವ ನವದೆಹಲಿ ತಲುಪಿದೆ. ನವದೆಹಲಿಗೆ ಬಂದಿಳಿದ ಭಾರತೀಯ ವಿದ್ಯಾರ್ಥಿಗಳು ಹಾಗೂ ನಾಗರಿಕರನ್ನು ಬರಮಾಡಿಕೊಳ್ಳಲಾಗಿದೆ.