ಆಂಧ್ರಪ್ರದೇಶ :ಚಿತ್ತೂರು ಜಿಲ್ಲೆಯ ಪುಣಗನೂರಿನಲ್ಲಿ ದಯಾಮರಣ ನೀಡುವಂತೆ ತಾಯಿಯೊಬ್ಬಳು ತನ್ನ ಮಗನನ್ನು ಸ್ಥಳೀಯ ನ್ಯಾಯಾಲಯಕ್ಕೆ ಕರೆದು ತಂದಿರುವ ಘಟನೆ ನಡೆದಿದೆ.
ಮಣಿ ಮತ್ತು ಅರುಣಾ ದಂಪತಿ ಪುತ್ರ ಹರ್ಷವರ್ಧನ್ (9)ಗೆ ಕಳೆದ 5 ವರ್ಷದಿಂದ ಅಪರೂಪದ ರಕ್ತ ಸಂಬಂಧಿತ ಕಾಯಿಲೆ ಕಾಣಿಸಿದೆ. ಸಾಲ ಸೂಲ ಮಾಡಿ ಚಿಕಿತ್ಸೆ ಕೊಡಿಸಿದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ಕಾಯಿಲೆಯಿಂದ ಬಳಲುತ್ತಿರುವ ಹರ್ಷವರ್ಧನ್ ಸ್ಥಿತಿ ದಿನದಿಂದ ದಿನಕ್ಕೆ ಗಂಭೀರವಾಗುತ್ತಿದೆ.