ಮಧ್ಯಪ್ರದೇಶ:ಪತಿಯೊಂದಿಗಿನ ಮನಸ್ತಾಪದಿಂದ ಮಕ್ಕಳನ್ನು ಕಾಲಿನಿಂದ ತುಳಿದು ಪ್ರತಿನಿತ್ಯ ಚಿತ್ರಹಿಂಸೆ ನೀಡುತ್ತಿರುವ ಪಾಪಿ ತಾಯಿಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಮಧ್ಯಪ್ರದೇಶದ ಸಾಗರ್ ಜಿಲ್ಲೆಯ ಬಮ್ಹೌರಿ ಕಲಾನ್ ಗ್ರಾಮದಲ್ಲಿ ನಡೆದಿದೆ ಎನ್ನಲಾದ ವಿಡಿಯೋವೊಂದು ಹರಿದಾಡುತ್ತಿದೆ.
ಸದ್ಯ ವಿಡಿಯೋದಲ್ಲಿ ತಾಯಿ ಮಗುವನ್ನು ನೆಲದಲ್ಲಿ ಹಾಕಿ ತುಳಿಯುತ್ತಿದ್ದು, ಇನ್ನೋರ್ವ ಮಗುವವಿಗೂ ಕಾಲಿನಿಂದ ಒದೆಯುತ್ತಿದ್ದಾಳೆ. ಈ ದೃಶ್ಯವನ್ನು ಎದುರುಗಡೆಯ ಮನೆಯಿಂದ ಮೊಬೈಲ್ನಲ್ಲಿ ಸೆರೆ ಹಿಡಿಯಲಾಗಿದೆ. ದೃಶ್ಯದಲ್ಲಿರುವ ಮಹಿಳೆ ಹೆಸರು ಜಯಂತಿ ಬಾಯಿ ಎಂದು ಹಲವರು ಗುರುತಿಸಿದ್ದಾರೆ.