ಪಾಟ್ನಾ (ಬಿಹಾರ್):ಆನ್ಲೈನ್ನಲ್ಲಿ ಪಿಜ್ಜಾ ಆರ್ಡರ್ ಮಾಡಿದ ವ್ಯಕ್ತಿಯ ಖಾತೆಯಿಂದ ಬರೋಬ್ಬರಿ 30 ಸಾವಿರ ರೂಪಾಯಿ ಸೈಬರ್ ಕಳ್ಳರ ಪಾಲಾಗಿರುವ ಘಟನೆ ನಡೆದಿದೆ.
ಆನ್ಲೈನ್ನಲ್ಲಿ ಪಿಜ್ಜಾ ಖರೀದಿಸಲು ಹೋಗಿ 30 ಸಾವಿರ ರೂ. ಕಳೆದುಕೊಂಡ ವ್ಯಕ್ತಿ
200 ರೂಪಾಯಿಯ ಪಿಜ್ಜಾ ಆರ್ಡರ್ ಮಾಡಲು ಹೋಗಿ ಖಾತೆಯಲ್ಲಿದ್ದ 30 ಸಾವಿರ ರೂಪಾಯಿ ಕಳೆದುಕೊಂಡ ಘಟನೆ ನಡೆದಿದೆ. ನಕಲಿ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿದ ಪರಿಣಾಮ ಖಾತೆಯ ಹಣ ಎಗರಿಸಲಾಗಿದೆ. ಈ ಸಂಬಂಧ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ಕೈಗೊಂಡಿದ್ದಾರೆ.
ಆನ್ಲೈನ್ನಲ್ಲಿ ಪಿಜ್ಜಾ ಖರೀದಿಸಲು ಹೋಗಿ 30 ಸಾವಿರ ಕಳೆದುಕೊಂಡ ವ್ಯಕ್ತಿ
ಇಲ್ಲಿನ ದಾನಾಪುರ ಬಳಿಯ ಸುಲ್ತಾನ್ಪುರದ ನಿವಾಸಿ ನಿಕೇತ್ ರಾಜ್ ಅವರು ಪಿಜ್ಜಾ ಆರ್ಡರ್ ಮಾಡಿದ್ದರು. ಈ ಪಿಜ್ಜಾಗೆ 280 ರೂಪಾಯಿ ಎಂದು ನಮೂದಿಸಲಾಗಿತ್ತು. ಇದೇ ವೇಳೆ, ಆನ್ಲೈನ್ನಲ್ಲಿ ಹಣ ಪಾವತಿಸಲು ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿ ಎಂದು ಸಂದೇಶ ಬಂದಿತ್ತು.
ಇದನ್ನು ಪಾಲಿಸಿದ ನಿಕೇತ್ ಕೋಡ್ ಸ್ಕ್ಯಾನ್ ಮಾಡಿದ್ದಾರೆ. ಈ ರೀತಿ ಸ್ಕ್ಯಾನ್ ಮಾಡಿದ ಮರುಕ್ಷಣವೇ ಖಾತೆಯಿಂದ ಹಂತ ಹಂತವಾಗಿ 29,998 ರೂಪಾಯಿ ಖಾಲಿಯಾಗಿದೆ. ಈ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ನಿಕೇತ್ ದೂರು ದಾಖಲಿಸಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ.
Last Updated : Nov 23, 2020, 10:02 AM IST