ಪುಣೆ:ತನ್ನ ಪತ್ನಿ ವಿಚ್ಛೇದನಕ್ಕಾಗಿ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಕ್ಕೆ ಕುಪಿತಗೊಂಡ ವ್ಯಕ್ತಿಯೊಬ್ಬ ನ್ಯಾಯಾಲಯದ ಆವರಣದಲ್ಲೇ ಪತ್ನಿ ಮತ್ತು ಅತ್ತೆಯನ್ನು ಗುಂಡಿಕ್ಕಿ ಕೊಲೆ ಮಾಡಿದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.
ವಿಚ್ಛೇದನ ಕೋರಿದ್ದಕ್ಕೆ ಪತ್ನಿ, ಅತ್ತೆಗೆ ಕೋರ್ಟ್ನಲ್ಲೇ ಗುಂಡಿಟ್ಟು ಕೊಂದ ಪತಿ
ತನ್ನಿಂದ ವಿಚ್ಛೇದನ ಕೋರಿ ಕೋರ್ಟ್ ಮೊರೆ ಹೋಗಿದ್ದಕ್ಕೆ ಪತಿಯೊಬ್ಬ ನ್ಯಾಯಾಲಯದ ಆವರಣದಲ್ಲೇ ಪತ್ನಿ, ಅತ್ತೆಯನ್ನು ಗುಂಡಿಕ್ಕಿ ಕೊಲೆ ಮಾಡಿದ ಘಟನೆ ನಡೆದಿದೆ.
ಕೋರ್ಟ್ನಲ್ಲೇ ಗುಂಡಿಟ್ಟು ಕೊಂದ ಪತಿ
ಪುಣೆಯ ಶಿರೂರಿನಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ಪತ್ನಿ ತನ್ನಿಂದ ವಿಚ್ಛೇದನ ಕೋರಿ ಶಿರೂರಿನ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ವಿಚಾರಣೆಗೆಂದು ಬಂದಿದ್ದ ವೇಳೆ, ಇಬ್ಬರ ಮಧ್ಯೆ ವಾಗ್ವಾದ ನಡೆದಿದೆ. ಈ ವೇಳೆ, ಕ್ರುದ್ಧನಾದ ವ್ಯಕ್ತಿ ನ್ಯಾಯಾಲಯದ ಆವರಣದಲ್ಲೇ ಪತ್ನಿ ಮತ್ತು ಜೊತೆಗಿದ್ದ ಅತ್ತೆಯ ಮೇಲೆ ಗುಂಡು ಹಾರಿಸಿದ್ದಾನೆ. ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಆರೋಪಿ ಮಾಜಿ ಸೈನಿಕ ಎಂದು ತಿಳಿದು ಬಂದಿದೆ.
ಓದಿ:ಲವ್ ಮ್ಯಾರೇಜ್ ಆದ ಮಗಳು.. ವರ್ಷದ ಬಳಿಕ ಅಳಿಯನ ಗುಂಡಿಕ್ಕಿ ಕೊಂದ ಮಾವ!
Last Updated : Jun 7, 2022, 7:28 PM IST