ಕರ್ನಾಟಕ

karnataka

By ETV Bharat Karnataka Team

Published : Dec 13, 2023, 9:30 PM IST

ETV Bharat / bharat

ಶಬರಿಮಲೆ ಯಾತ್ರಿಕರ ಸುರಕ್ಷತೆಗೆ ಪ್ರಾರ್ಥಿಸಿ 300 ಅಡಿ ಆಳದ ಬಾವಿಯಲ್ಲಿ ಯೋಗಾಸನ

ತಮಿಳುನಾಡಿನ ಥೇಣಿ ಜಿಲ್ಲೆಯಲ್ಲಿ ಶಬರಿಮಲೆ ಯಾತ್ರಿಕರ ಸುರಕ್ಷತೆಗೆ ಪ್ರಾರ್ಥಿಸಿ ವ್ಯಕ್ತಿಯೊಬ್ಬರು 300 ಅಡಿ ಆಳದ ಬಾವಿಯಲ್ಲಿ ಯೋಗಾಸನ ಮಾಡಿದ್ದಾರೆ.

a-man-did-yoga-about-2-hours-in-300-feet-deep-well-for-sabarimala-pilgrims
ಶಬರಿಮಲೆ ಯಾತ್ರಿಕರ ಸುರಕ್ಷತೆಗೆ ಪ್ರಾರ್ಥಿಸಿ 300 ಅಡಿ ಆಳದ ಬಾವಿಯಲ್ಲಿ ಯೋಗಾಸನ

ಶಬರಿಮಲೆ ಯಾತ್ರಿಕರ ಸುರಕ್ಷತೆಗೆ ಪ್ರಾರ್ಥಿಸಿ 300 ಅಡಿ ಆಳದ ಬಾವಿಯಲ್ಲಿ ಯೋಗಾಸನ

ಥೇಣಿ (ತಮಿಳುನಾಡು) : ಹಿರಿಯ ವ್ಯಕ್ತಿಯೊಬ್ಬರು ಶಬರಿಮಲೆ ಯಾತ್ರಿಕರು ಸುರಕ್ಷಿತವಾಗಿ ಮರಳಲು 300 ಅಡಿ ಆಳದ ಬಾವಿಯಲ್ಲಿ ಎರಡು ಗಂಟೆಗಳ ಕಾಲ ಯೋಗಾಸನ ಮಾಡಿದ್ದಾರೆ. ಇಲ್ಲಿನ ಥೇಣಿ ಜಿಲ್ಲೆಯ ಬೋಡಿ ಗ್ರಾಮದ ದೇವರಂ ನಿವಾಸಿ ವಿಜಯನ್​ ಎಂಬವರು ಬಾವಿಯಲ್ಲಿ ಯೋಗಾಸನ ಮಾಡಿದ್ದಾರೆ. ಇವರು ನೀರಿನಲ್ಲಿ ತೇಲುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಶಬರಿಮಲೆ ಅಯ್ಯಪ್ಪನ ಸನ್ನಿಧಾನಕ್ಕೆ ದೇಶದ ವಿವಿಧೆಡೆಯಿಂದ ಭಕ್ತರು ಆಗಮಿಸುತ್ತಿರುವುದರಿಂದ ದಿನದಿಂದ ದಿನಕ್ಕೆ ಭಕ್ತರ ಸಂಖ್ಯೆ ಹೆಚ್ಚಳವಾಗುತ್ತಿದೆ. ಇದರಿಂದಾಗಿ ಕಳೆದ ಕೆಲವು ದಿನಗಳಿಂದ ಅಯ್ಯಪ್ಪ ಭಕ್ತರು ಪರದಾಡುವಂತಾಗಿದೆ. ಭಕ್ತರು ಹಲವು ಗಂಟೆಗಳ ಕಾಲ ಅಯ್ಯಪ್ಪನ ದರ್ಶನಕ್ಕೆ ಸರತಿ ಸಾಲಿನಲ್ಲಿ ನಿಲ್ಲಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಭಕ್ತರನ್ನು ನಿಯಂತ್ರಿಸುವಲ್ಲಿ ಕೇರಳ ಸರ್ಕಾರ ಸಂಪೂರ್ಣ ವಿಫಲವಾಗಿದ್ದು, ಇಲ್ಲಿನ ಅಧಿಕಾರಿಗಳಿಗೆ, ಪೊಲೀಸರಿಗೆ ಸಚಿವರಿಗೆ ಭಕ್ತರು ಹಿಡಿಶಾಪ ಹಾಕುತ್ತಿದ್ದಾರೆ. ಅಲ್ಲದೆ ಇಲ್ಲಿನ ಅವ್ಯವಸ್ಥೆಯಿಂದಾಗಿ ಭಕ್ತರ ಸಾವು ಕೂಡ ಸಂಭವಿಸಿದೆ.

ಈ ಸಂಬಂಧ ವಿಜಯನ್​ ಅವರು ಇಲ್ಲಿನ ಚಿನ್ನಮಾನೂರಿ ಎಂಬಲ್ಲಿರುವ ಸುಮಾರು 300 ಆಡಿ ಆಳದ ಬಾವಿಯಲ್ಲಿ ಯೋಗಾಸನ ಮಾಡಿದ್ದಾರೆ. ಒಟ್ಟು ಎರಡು ಗಂಟೆಗಳ ಕಾಲ ನೀರಿನಲ್ಲಿದ್ದು ತೇಲಿಕೊಂಡು ಯೋಗಾಸನ ಮಾಡಿದ್ದು, ಶಬರಿಮಲೆ ಯಾತ್ರಿಕರ ಸುರಕ್ಷತೆಗೆ ಪ್ರಾರ್ಥಿಸಿದ್ದಾರೆ. ವಿಜಯನ್​ ತಮ್ಮ ಊರಿನಲ್ಲಿ ಆಧ್ಯಾತ್ಮಿಕ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಯೋಗಾಭ್ಯಾಸ ಮಾಡಿಕೊಂಡು ಬಂದಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ವಿಜಯನ್​​, ನಾನು ಶಬರಿಮಲೆ ಮತ್ತು ಪಳನಿ ಮುರುಗನ್​ ದೇವಾಲಯಕ್ಕೆ ಮಾಲೆ ಹಾಕಿ ಹರಕೆ ತೀರಿಸುವ ಭಕ್ತರ ಸುರಕ್ಷತೆಗಾಗಿ ಯೋಗಾಸನ ಮಾಡಿದ್ದೇನೆ. ಈ ಭಕ್ತರು ಉಪವಾಸ ಮಾಡಿ ದೇವರನ್ನು ಆರಾಧಿಸುತ್ತಾರೆ. ಅವರು ಯಾವುದೇ ತೊಂದರೆ ಇಲ್ಲದೆ ಮರಳಿ ಬರಬೇಕು ಎಂದು ಪ್ರಾರ್ಥಿಸಿರುವುದಾಗಿ ತಿಳಿಸಿದರು.

ಇದನ್ನೂ ಓದಿ :ಶಬರಿಮಲೆಯಲ್ಲಿ ಭಾರೀ ಜನದಟ್ಟಣೆ: ಅವ್ಯವಸ್ಥೆ ವಿರುದ್ಧ ಸಿಡಿದ ಭಕ್ತರಿಂದ ಪ್ರತಿಭಟನೆ

ಈ ನಡುವೆ, ಶಬರಿಮಲೆಯಲ್ಲಿ ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಗಂಟೆಗಟ್ಟಲೆ ಸರದಿ ಸಾಲಿನಲ್ಲಿ ನಿಂತ ಪರಿಣಾಮ ಬಾಲಕಿಯೊಬ್ಬಳು ಮೃತಪಟ್ಟರೆ, ಇನ್ನೊಂದು ಅವಘಡದಲ್ಲಿ ಯಾತ್ರಿಕನೊಬ್ಬ ಅಸುನೀಗಿದ ಘಟನೆ ನಡೆದಿದೆ. ಬುಧವಾರ ಬೆಳಗ್ಗೆ ಭಾರೀ ಜನದಟ್ಟಣೆಯಿಂದ ಬೇಸತ್ತ ಭಕ್ತರು ಪ್ರತಿಭಟನೆ ಕೂಡ ನಡೆಸಿದ್ದಾರೆ. ಈ ಮಧ್ಯೆ ಭಕ್ತರಿಗೆ ದರ್ಶನ ವ್ಯವಸ್ಥೆ ಮಾಡಿಕೊಡಲಾಗುವುದು ಎಂದು ಸರ್ಕಾರ ತಿಳಿಸಿದೆ.

ಭಕ್ತರ ಪ್ರತಿಭಟನೆ:ಲಕ್ಷಾಂತರ ಸಂಖ್ಯೆಯಲ್ಲಿ ಒಟ್ಟೊಟ್ಟಿಗೆ ಭಕ್ತರು ಶಬರಿಮಲೆಗೆ ಬಂದಿದ್ದರಿಂದ ಎಲ್ಲೆಂದರಲ್ಲಿ ಜನದಟ್ಟಣೆ ಉಂಟಾಗಿದೆ. ದಟ್ಟಣೆಯಿಂದಾಗಿ ಗಂಟೆಗಟ್ಟಲೆ ಭಕ್ತರು ನಿಂತಲ್ಲೆ ನಿಲ್ಲಬೇಕಾದ ಪರಿಸ್ಥಿತಿ ಎದುರಾಗಿದೆ. ಇದರಿಂದ ರೋಸಿ ಹೋದ ಅಯ್ಯಪ್ಪ ಭಕ್ತರು ಸರ್ಕಾರ ದರ್ಶನಕ್ಕೆ ಸೂಕ್ತ ವ್ಯವಸ್ಥೆ ಮಾಡಿಲ್ಲ ಎಂದು ಆರೋಪಿಸಿ ನಿಲಕ್ಕಲ್‌ ಎಂಬಲ್ಲಿ ಪಂಬಾ - ಎರುಮೇಲಿ ರಸ್ತೆಯನ್ನು ತಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details