ಕರ್ನಾಟಕ

karnataka

By

Published : May 17, 2021, 9:48 AM IST

ETV Bharat / bharat

ಮನೆಮಂದಿಗೆ ಕೊರೊನಾ ಹಬ್ಬುವ ಭೀತಿ: ಮರವನ್ನೇ ಐಸೋಲೇಷನ್​ ಕೇಂದ್ರ ಮಾಡಿದ ಸೋಂಕಿತ

ಕುಟುಂಬ ಸದಸ್ಯರಿಗೆ ಕೊರೊನಾ ಪಸರಿಸುತ್ತದೆ ಎಂಬ ಭಯದಿಂದ ಮರದ ಮೇಲೆ ಐಸೋಲೇಶನ್​ ಕೇಂದ್ರ ನಿರ್ಮಿಸಿರುವ ಯುವಕನೋರ್ವ ಜೀವನ ಸಾಗಿಸುತ್ತಿದ್ದಾನೆ.

ಮರವನ್ನೇ ಐಸೋಲೇಷನ್​ ಕೇಂದ್ರ ಮಾಡಿದ ಸೋಂಕಿತ

ನಲ್ಗೊಂಡ(ತೆಲಂಗಾಣ):ಕೊರೊನಾ ಸೋಂಕು ತಗುಲಿದ ಹಿನ್ನೆಲೆಯಲ್ಲಿ ಇಲ್ಲಿನ ವಿದ್ಯಾರ್ಥಿಯೊಬ್ಬ ಮರದಲ್ಲಿ ಐಸೋಲೇಶನ್​ ಕೇಂದ್ರ ಮಾಡಿಕೊಂಡು ಪ್ರತ್ಯೇಕ ವಾಸ ನಡೆಸುತ್ತಿದ್ದಾನೆ.

ಜಿಲ್ಲೆಯ ಅಡವಿಲ ದೇವಲಪಲ್ಲಿ ಮಂಡಳಿಯ ಕೊತ್ತ ನಂದಿಕೊಂಡದ ರಾಮವತ್ ಶಿವ ಎಂಬ ಯುವಕನಿಗೆ ಕೊರೊನಾ ಬಾಧಿಸಿದೆ. ಈತ ಸ್ಥಳೀಯವಾಗಿ ನಡೆಸುತ್ತಿರುವ ಐಕೆಪಿ ಧಾನ್ಯ ಖರೀದಿ ಕೇಂದ್ರದಲ್ಲಿ ಪೋರ್ಟರ್ ಆಗಿ ಕೆಲಸ ಮಾಡುತ್ತಿದ್ದ. ಈ ಸಂದರ್ಭದಲ್ಲಿ ಕೊರೊನಾ ಸೋಂಕಿನ ಲಕ್ಷಣಗಳು ಕಂಡುಬಂದಿದ್ದು ತಪಾಸಣೆ ಮಾಡಿದಾಗ ಸೋಂಕು ದೃಢಪಟ್ಟಿದೆ.

ಆದರೆ ಯುವಕ ವಾಸಿಸುವ ಮನೆಯಲ್ಲಿ ನಾಲ್ವರಿದ್ದು, ಒಂದೇ ಕೊಠಡಿ ಇದೆ. ಮನೆಯಲ್ಲಿದ್ದರೆ ಕುಟುಂಬದ ಸದಸ್ಯರಿಗೆಲ್ಲ ಸೋಂಕು ಹರಡುತ್ತದೆ ಎಂಬ ಆತಂಕದಿಂದ ಮರದ ಮೇಲೆ ಮಂಚವನ್ನು ಕಟ್ಟಿಕೊಂಡು ಐಸೋಲೇಶನ್​ ಆಗಿದ್ದಾನೆ. ಒಂಬತ್ತು ದಿನಗಳ ಕಾಲ ಹಗ್ಗದ ಸಹಾಯದಿಂದ ಕುಟುಂಬಸ್ಥರು ನೀಡಿದ ಆಹಾರ ಮತ್ತು ನೀರನ್ನು ಸೇವಿಸುತ್ತಿದ್ದಾನೆ.

ಇದನ್ನು ಕಂಡ ಗ್ರಾಮಸ್ಥರು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಈತನ ಸಮಸ್ಯೆಗೆ ಸ್ಪಂದಿಸಿ ಗ್ರಾಮ ಪಂಚಾಯಿತಿಯಲ್ಲಿ ಪ್ರತ್ಯೇಕ ಕ್ವಾರೆಂಟೈನ್‌ ಕೇಂದ್ರಗಳನ್ನು ಸ್ಥಾಪಿಸಬೇಕೆಂದು ಒತ್ತಾಯಿಸಿದ್ದಾರೆ.

ABOUT THE AUTHOR

...view details