ಕೋಲ್ಕತ್ತಾ (ಪಶ್ಚಿಮಬಂಗಾಳ): ಚಿನ್ನದ ಜಿಂಕೆ ಪ್ರತಿಮೆಯನ್ನು ಕೋಲ್ಕತ್ತಾ ಪೊಲೀಸ್ ಮ್ಯೂಸಿಯಂನಲ್ಲಿರಿಸಲು ನಿರ್ಧರಿಸಲಾಗಿದೆ. ಇದೇನು ಸಾಮಾನ್ಯ ಜಿಂಕೆ ಪ್ರತಿಮೆ ಎಂದುಕೊಂಡಿರಾ? ಅಲ್ಲ.., ಈ ಬಂಗಾರ ಲೇಪಿತ ಜಿಂಕೆ ಪ್ರತಿಮೆಯನ್ನ ಭಾರತದಲ್ಲಿ ಬ್ರಿಟಿಷ್ ಆಳ್ವಿಕೆಯಿದ್ದ ಕಾಲದಲ್ಲಿ ಅಂದಿನ ಕೋಲ್ಕತ್ತಾ ಪೊಲೀಸರು ಕಳ್ಳತನ ಪ್ರಕರಣವೊಂದನ್ನು ತನಿಖೆ ಮಾಡುವಾಗ ವಶಪಡಿಸಿಕೊಂಡಿದ್ದರು.
ಈವರೆಗೆ ಈ ಪ್ರತಿಮೆ ಕೋಲ್ಕತ್ತಾದ ಲಾಲ್ಬಜಾರ್ನಲ್ಲಿರುವ ಪೊಲೀಸ್ ಪ್ರಧಾನ ಕಚೇರಿಯಲ್ಲಿಡಲಾಗಿದೆ. ಇನ್ನು ಮುಂದೆ ಕೋಲ್ಕತ್ತಾ ಪೊಲೀಸ್ ವಸ್ತು ಸಂಗ್ರಹಾಲಯದಲ್ಲಿ ಪ್ರದರ್ಶನಕ್ಕೆ ಇರಿಸಲು ನಿರ್ಧರಿಸಲಾಗಿದೆ. ಹೀಗಾಗಿ, ಸಾರ್ವಜನಿಕರು ಈ ಪುರಾತನ ಮತ್ತು ಬೆಲೆಬಾಳುವ ಪ್ರತಿಮೆ ನೋಡಬಹುದಾಗಿದೆ.