ಧರ್ಮಪುರಿ (ತಮಿಳುನಾಡು): ಇಂದು ತಮಿಳುನಾಡಿನಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯುತ್ತಿದೆ. ಮತದಾನದ ದಿನದಂದು ವೋಟ್ ಮಾಡುವುದು ಪ್ರಜಾಪ್ರಭುತ್ವದಲ್ಲಿ ಸಾಮಾನ್ಯ ಸಂಗತಿಯಾಗಿದೆ. ಆದರೆ ಇಲ್ಲೊಬ್ಬ ಚಾಲಕ ತಾನು ಚಲಾಯಿಸುತ್ತಿದ್ದ ಬಸ್ ನಿಲ್ಲಿಸಿ ಬಳಿಕ ವೋಟ್ ಮಾಡುವ ಮೂಲಕ ಹಕ್ಕು ಚಲಾಯಿಸಿದ್ದಾರೆ.
ಖಾಸಗಿ ಬಸ್ವೊಂದು ಧರ್ಮಪುರಿ ಜಿಲ್ಲೆಯ ಬೊಮ್ಮಿಡಿ ಗ್ರಾಮದ ಮಾರ್ಗವಾಗಿ ಪಾಲಕೋಡ್ನಿಂದ ಸೇಲಂಗೆ ಸಾಗುತ್ತಿತ್ತು. ಈ ಬಸ್ನ ಚಾಲಕ ಶ್ರೀಧರ್ ತನ್ನ ಹುಟ್ಟೂರಾದ ಬೊಮ್ಮಿಡಿ ಬರುತ್ತಿದ್ದಂತೆಯೇ ಬಸ್ ನಿಲ್ಲಿಸಿ, ಪ್ರಯಾಣಿಕರಿಗೆ 10 ನಿಮಿಷ ಕಾಯುವಂತೆ ವಿನಂತಿಸಿ ಬೊಮ್ಮಿಡಿ ಮತಗಟ್ಟೆಯಲ್ಲಿ ಮತ ಹಾಕಿದ್ದಾರೆ.