ಕರ್ನಾಟಕ

karnataka

ETV Bharat / bharat

ಕಲ್ಲು ಬಂಡೆ ನಡುವೆ ಸಿಲುಕಿದ ಹಸುವಿನ ತಲೆ: ಕೊನೆಗೂ ಬದುಕಿತು ಬಡ ಜೀವ!

ರೈತನೊಬ್ಬ ಹಸುಗಳನ್ನು ಮೇಯಿಸಲು ಅರಣ್ಯಕ್ಕೆ ಹೊಡೆದುಕೊಂಡು ಹೋಗಿದ್ದ ವೇಳೆ, ಹಸುವೊಂದು ಕಲ್ಲು ಬಂಡೆಗಳ ಸಂದಿಯಲ್ಲಿ ತನ್ನ ತಲೆಯನ್ನು ಸಿಲುಕಿಸಿಕೊಂಡು ಒದ್ದಾಡುವಂತಾಗಿತ್ತು.

A COW's HEAD WAS STUCK BETWEEN THE STONES IN ADILABAD
ಎರಡು ಬಂಡೆಗಳ ನಡುವೆ ಸಿಲುಕಿದ ಹಸುವಿನ ತಲೆ: ಕೊನೆಗೂ ಬದುಕಿತು ಬಡ ಜೀವ!

By

Published : May 11, 2022, 3:54 PM IST

Updated : May 11, 2022, 8:09 PM IST

ಆದಿಲಾಬಾದ್(ತೆಲಂಗಾಣ):ಮೇಯಲು ಕಾಡಿಗೆ ಹೋಗಿದ್ದ ಹಸು ಹುಲ್ಲಿನ ಆಸೆಗೆ ಹೋಗಿ ತಲೆಯನ್ನು ಅಲ್ಲಿದ್ದ ಕಲ್ಲಿನ ಮಧ್ಯ ಇರುವ ಸೀಳಿನಲ್ಲಿ ಸಿಲುಕಿಸಿಕೊಂಡು ಒದ್ದಾಡಿದ ಘಟನೆ ಆದಿಲಾಬಾದ್ ಜಿಲ್ಲೆಯ ಸಿರಿಕೊಂಡ ವಲಯದ ಲಚಿಂಪುರ(ಬಿ) ಅರಣ್ಯ ಪ್ರದೇಶದಲ್ಲಿ ನಡೆದಿದೆ.

ಇಲ್ಲಿನ ರೈತನೊಬ್ಬ ಹಸುಗಳನ್ನು ಮೇಯಿಸಲು ಅರಣ್ಯಕ್ಕೆ ಹೊಡೆದುಕೊಂಡು ಹೋಗಿದ್ದರು. ಈ ವೇಳೆ ಹಸುವೊಂದು ಕಲ್ಲು ಬಂಡೆಗಳ ಸಂದಿಯಲ್ಲಿರುವ ಮಧುಕಾ ಲಾಂಗಿಫೋಲಿಯಾ ಮೇವು ನೋಡಿ ತಿನ್ನಲು ಹೋಗಿತ್ತು. ಈ ವೇಳೆ ಅದು ಕಲ್ಲುಗಳ ನಡುವಿನ ಸೀಳಿನಲ್ಲಿ ತನ್ನ ತಲೆಯನ್ನು ಸಿಲುಕಿಸಿಕೊಂಡು ಒದ್ದಾಡಿತು.

ಕಲ್ಲು ಬಂಡೆ ನಡುವೆ ಸಿಲುಕಿದ ಹಸುವಿನ ತಲೆ

ಅಲ್ಲಿಂದ ಹೊರಬರಲು ಅದು ತುಂಬಾ ಪ್ರಯತ್ನಿಸಿದೆ. ಆದರೆ, ಅದು ಸಾಧ್ಯವಾಗಿರಲಿಲ್ಲ. ಈ ವೇಳೆ ಸ್ಥಳಕ್ಕೆ ಬಂದ ಹಸು ಮೇಯಿಸುತ್ತಿದ್ದ ವ್ಯಕ್ತಿ, ಆಕಳು ಕಲ್ಲು ಬಂಡೆ ನಡುವೆ ತಲೆ ಸಿಕ್ಕಿಸಿಕೊಂಡಿದ್ದನ್ನು ನೋಡಿದ್ದಾನೆ. ಬಳಿಕ ಗ್ರಾಮಸ್ಥರ ನೆರವಿನಿಂದ ಹಸುವನ್ನು ಪಾರು ಮಾಡಿದ್ದಾನೆ. ಈ ವಿಡಿಯೋ ಈಗ ವೈರಲ್​ ಆಗಿದೆ.

ಇದನ್ನು ಓದಿ:ಕಾಡಿನ ರಾಜ ಸಿಂಹಕ್ಕೇ ಬೆವರಿಳಿಸಿದ ಶ್ವಾನ- ವಿಡಿಯೋ ನೋಡಿ

Last Updated : May 11, 2022, 8:09 PM IST

For All Latest Updates

TAGGED:

ABOUT THE AUTHOR

...view details