ಕರ್ನಾಟಕ

karnataka

ETV Bharat / bharat

ಬ್ರಹ್ಮಪುತ್ರ ನದಿಯಲ್ಲಿ ಮುಳುಗಿದ ದೋಣಿ..15 ಜನರ ರಕ್ಷಣೆ - Brahmaputra river

ಅಸ್ಸೋಂ ಧುಬ್ರಿ ಜಿಲ್ಲೆಯ ಬ್ರಹ್ಮಪುತ್ರ ನದಿಯಲ್ಲಿ ಸಂಚರಿಸುತ್ತಿದ್ದ ದೋಣಿಯೊಂದು ಮಗುಚಿ ಬಿದ್ದಿದೆ.

ಬ್ರಹ್ಮಪುತ್ರ ನದಿಯಲ್ಲಿ ಮುಳುಗಿದ ದೋಣಿ
ಬ್ರಹ್ಮಪುತ್ರ ನದಿಯಲ್ಲಿ ಮುಳುಗಿದ ದೋಣಿ

By

Published : Sep 29, 2022, 9:26 PM IST

ಗುವಾಹಟಿ(ಅಸ್ಸೋಂ):ಇಲ್ಲಿನ ಧುಬ್ರಿ ಜಿಲ್ಲೆಯ ಬ್ರಹ್ಮಪುತ್ರ ನದಿಯಲ್ಲಿ ಹಲವು ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ದೋಣಿಯೊಂದು ಮಗುಚಿ ಬಿದ್ದ ಪರಿಣಾಮ ಓರ್ವ ಸರ್ಕಾರಿ ಅಧಿಕಾರಿ ಮತ್ತು ಶಾಲಾ ವಿದ್ಯಾರ್ಥಿಗಳು ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೋಣಿಯಲ್ಲಿ ಸುಮಾರು 100 ಪ್ರಯಾಣಿಕರು ಮತ್ತು 10 ಮೋಟಾರು ಸೈಕಲ್‌ಗಳನ್ನು ತುಂಬಿಸಲಾಗಿತ್ತು ಎಂದು ಸ್ಥಳೀಯರು ಹೇಳಿದ್ದಾರೆ. ಧುಬ್ರಿ ಪಟ್ಟಣದಿಂದ ಸುಮಾರು 3 ಕಿ ಮೀ ದೂರದಲ್ಲಿರುವ ಅದಬರಿ ಸೇತುವೆಗೆ ದೋಣಿ ಢಿಕ್ಕಿ ಹೊಡೆದು ಮಗುಚಿ ಬಿದ್ದಿದ್ದು, ಇದುವರೆಗೆ 15 ಜನರನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಧುಬ್ರಿ ವೃತ್ತದ ಅಧಿಕಾರಿ ಸಂಜು ದಾಸ್, ಭೂ ದಾಖಲೆ ಅಧಿಕಾರಿ ಮತ್ತು ಕಚೇರಿ ಸಿಬ್ಬಂದಿ ಸಹ ಸವೆತ ಪೀಡಿತ ಪ್ರದೇಶವನ್ನು ಸಮೀಕ್ಷೆ ಮಾಡಲು ದೋಣಿಯಲ್ಲಿ ಪ್ರಯಾಣಿಸುತ್ತಿದ್ದರು. ಸ್ಥಳೀಯರು ಹಳ್ಳಿಗಾಡಿನ ದೋಣಿಗಳೊಂದಿಗೆ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ರಾಜ್ಯ ವಿಪತ್ತು ನಿರ್ವಹಣಾ ಪಡೆಯ (ಎಸ್‌ಡಿಆರ್‌ಎಫ್) ಡ್ರೈವರ್‌ಗಳನ್ನು ಸಹ ನಿಯೋಜಿಸಲಾಗಿದೆ ಎಂದು ಗುವಾಹಟಿಯ ಮತ್ತೊಬ್ಬ ಅಧಿಕಾರಿ ತಿಳಿಸಿದ್ದಾರೆ.

ಓದಿ:ರಸ್ತೆಯಲ್ಲೇ ​ಗುಂಡು ಹಾರಿಸಿ ಯುವತಿ ಕೊಂದ ಯುವಕ; ಪರಾರಿಯಾಗುವಾಗ ಅಪಘಾತದಲ್ಲಿ ಸಾವು

ABOUT THE AUTHOR

...view details