ಕರ್ನಾಟಕ

karnataka

ಭ್ರಷ್ಟಾಚಾರ: 45 ಇಲಾಖೆಗಳ 715 ಕೇಂದ್ರ ಸರ್ಕಾರಿ ನೌಕರರ ವಿರುದ್ಧ'ಸಿಬಿಐ' ಕೇಸ್

By

Published : Mar 31, 2022, 6:27 PM IST

ಕೇಂದ್ರ ಸರ್ಕಾರದಲ್ಲಿ ಭ್ರಷ್ಟಾಚಾರ ತಡೆ ನಿಟ್ಟಿನಲ್ಲಿ 2017ರಲ್ಲಿ 210 ಪ್ರಕರಣ, 2018ರಲ್ಲಿ 158, 2019ರಲ್ಲಿ 141, 2020ರಲ್ಲಿ 95 ಹಾಗೂ 2011ರಲ್ಲಿ 111 ಪ್ರಕರಣಗಳು ದಾಖಲಾಗಿವೆ ಎಂದು ಜಿತೇಂದ್ರ ಸಿಂಗ್ ಮಾಹಿತಿ ನೀಡಿದ್ದಾರೆ.

ಕೇಂದ್ರ ಸರ್ಕಾರಿ ನೌಕರರ ವಿರುದ್ಧ ಭ್ರಷ್ಟಾಚಾರ ಕೇಸ್
corruption cases

ನವದೆಹಲಿ: ಕಳೆದ ನಾಲ್ಕು ವರ್ಷಗಳಲ್ಲಿ 715 ಜನ ಕೇಂದ್ರ ಸರ್ಕಾರಿ ನೌಕರರ ವಿರುದ್ಧ ಭ್ರಷ್ಟಾಚಾರ ಪ್ರಕರಣಗಳನ್ನು ಸಿಬಿಐ ದಾಖಲಿಸಿಕೊಂಡಿದೆ ಎಂದು ಕೇಂದ್ರ ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ, ಪಿಂಚಣಿ ಮತ್ತು ಪ್ರಧಾನಿ ಕಚೇರಿಯ ರಾಜ್ಯ ಖಾತೆ ಸಚಿವ ಜಿತೇಂದ್ರ ಸಿಂಗ್ ರಾಜ್ಯಸಭೆಯಲ್ಲಿ ಮಾಹಿತಿ ನೀಡಿದ್ದಾರೆ.

ಲಂಚ ಮತ್ತು ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಹಲವು ಇಲಾಖೆಗಳ 1,281 ಮಂದಿ ನೌಕರರ ವಿರುದ್ಧ ತನಿಖಾ ತಂಡಗಳು ಪ್ರಕರಣಗಳನ್ನು ದಾಖಲಿಸಿಕೊಂಡಿವೆ. ಇದರಲ್ಲಿ 45 ಇಲಾಖೆಗಳಿಗೆ ಸೇರಿದ 715 ನೌಕರರ ವಿರುದ್ಧ ತಲಾ ಒಂದರಂತೆ 715 ಪ್ರಕರಣಗಳನ್ನು ಸಿಬಿಐ ದಾಖಲಿಸಿಕೊಂಡಿದೆ ಎಂದು ಅವರು ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ಎಲ್ಲ ಪ್ರಕರಣಗಳಲ್ಲಿ ಪ್ರತ್ಯೇಕವಾಗಿ ಆಯಾ ಇಲಾಖೆಗಳ ನಿಯಮಗಳಿಗೆ ಅನುಸಾರವಾಗಿ ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ. ಕೇಂದ್ರ ಸರ್ಕಾರದಲ್ಲಿ ಭ್ರಷ್ಟಾಚಾರ ತಡೆ ನಿಟ್ಟಿನಲ್ಲಿ 2017ರಲ್ಲಿ 210 ಪ್ರಕರಣ, 2018ರಲ್ಲಿ 158, 2019ರಲ್ಲಿ 141, 2020ರಲ್ಲಿ 95 ಹಾಗೂ 2011ರಲ್ಲಿ 111 ಪ್ರಕರಣಗಳು ದಾಖಲಾಗಿವೆ ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:'ದೇಶದ ಅತಿದೊಡ್ಡ ಪಕ್ಷವೇ ಗೂಂಡಾಗಿರಿಯಲ್ಲಿ ತೊಡಗಿದರೆ, ಜನರಿಗೆ ತಪ್ಪು ಸಂದೇಶ ರವಾನೆ'

ABOUT THE AUTHOR

...view details