ಇಟಾನಗರ: ಅರುಣಾಚಲ ಪ್ರದೇಶದ ಪೂರ್ವ ಸಿಯಾಂಗ್ ಜಿಲ್ಲೆಯ ಪಾಸಿಘಾಟ್ ಜೈಲಿನಲ್ಲಿ ಕೈದಿಗಳು ಸಿನಿಮೀಯ ರೀತಿಯಲ್ಲಿ ತಪ್ಪಿಸಿಕೊಂಡಿದ್ದಾರೆ. ಭಾನುವಾರ ರಾತ್ರಿ ಊಟದ ಸಮಯದಲ್ಲಿ ಜೈಲಿನ ಗೇಟ್‌ಗಳನ್ನು ತೆರೆಯಲಾಗಿತ್ತು. ಇದೇ ಸಮಯವನ್ನು ಸುದುಪಯೋಗ ಮಾಡಿಕೊಂಡ 7 ಕೈದಿಗಳು ಜೈಲು ಸಿಬ್ಬಂದಿ ಮುಖಕ್ಕೆ ಖಾರದ ಪುಡಿ ಎರಚಿ ಪರಾರಿಯಾಗಿದ್ದಾರೆ.
ಪೊಲೀಸರ ಮುಖಕ್ಕೆ ಖಾರದ ಪುಡಿ ಎರಚಿ ಕೈದಿಗಳು ಜೈಲಿನಿಂದ ಸಿನಿಮೀಯ ರೀತಿಯಲ್ಲಿ ಪರಾರಿ - ಜೈಲಿನಿಂದ ಪರಾರಿ
ಪೊಲೀಸರ ಕಣ್ಣಿಗೆ ಖಾರದ ಪುಡಿ ಎರಚಿ ಏಳು ಮಂದಿ ಕೈದಿಗಳು ಜೈಲಿನಿಂದ ತಪ್ಪಿಸಿಕೊಂಡಿರುವ ಘಟನೆ ಅರುಣಾಚಲ ಪ್ರದೇಶದಲ್ಲಿ ನಡೆದಿದೆ.
ಪೊಲೀಸರ ಮುಖಕ್ಕೆ ಖಾರದ ಪುಡಿ ಎರಚಿ 7 ಮಂದಿ ಕೈದಿಗಳು ಜೈಲಿನಿಂದ ಸಿನಿಮೀಯ ರೀತಿಯಲ್ಲಿ ಪರಾರಿ..!
ಘಟನೆಯಲ್ಲಿ ಅಸ್ವಸ್ಥಗೊಂಡಿರುವ ಪೊಲೀಸರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಐಜಿಪಿ ಚುಕು ಅಪಾ ತಿಳಿಸಿದ್ದಾರೆ. ಪೊಲೀಸರ ತಂಡವು ನಾಪತ್ತೆಯಾಗಿರುವ ಕೈದಿಗಳಿಗಾಗಿ ಜಂಟಿ ಕಾರ್ಯಾಚರಣೆ ಆರಂಭಿಸಿದೆ. ಪಾಸಿಘಾಟ್‌ನಲ್ಲಿ ಕರ್ಫ್ಯೂ ವಿಧಿಸಿದ್ದರಿಂದ ಕೈದಿಗಳಿಗೆ ಹೆಚ್ಚು ದೂರ ಪ್ರಯಾಣಿಸಲು ಸಾಧ್ಯವಿಲ್ಲ ಮತ್ತು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಎಸ್‌ಪಿ ತಪಾಂಗ್ ಟಾಟಕ್ ಹೇಳಿದ್ದಾರೆ.