ಕರ್ನಾಟಕ

karnataka

ETV Bharat / bharat

6 ವರ್ಷದ ಬಾಲಕನ ತಲೆ ಕಡಿದು ಬಲಿ ನೀಡಿದ ಕೀಚಕರು.. ಇದು ದೈವಾದೇಶವಂತೆ! - ದೈವದ ಆದೇಶ

ಮದ್ಯದ ಅಮಲಿನಲ್ಲಿದ್ದ ಇಬ್ಬರು 6 ವರ್ಷದ ಬಾಲಕನ ತಲೆ ಕಡಿದ ಘಟನೆ ನಡೆದಿದೆ. ವಿಚಾರಣೆಯ ವೇಳೆ ಇದು ದೈವದ ಆದೇಶದ ಎಂದು ಆರೋಪಿಗಳು ಹೇಳಿಕೆ ನೀಡಿದ್ದಾರೆ.

6-year-old-boy-killed-by-two-men in delhi
6 ವರ್ಷದ ಮಗುವಿನ ತಲೆ ಕಡಿದು ಬಲಿ ನೀಡಿದ ಕೀಚಕರು

By

Published : Oct 3, 2022, 7:56 AM IST

ನವದೆಹಲಿ:ದೇವರಿಗೆ ಬಲಿದಾನವಾಗಿ ಪ್ರಾಣಿಗಳನ್ನು ಬಲಿ ಕೊಡುವುದನ್ನು ನೋಡಿದ್ದೇವೆ. ಆದರೆ, ಇಲ್ಲಿಬ್ಬರು 6 ವರ್ಷದ ಮಗುವನ್ನೇ "ದೈವಾದೇಶ" ಎಂದು ಕತ್ತು ಕಡಿದು ಅರ್ಪಿಸಿದ ಆಘಾತಕಾರಿ ಘಟನೆ ದೆಹಲಿಯಲ್ಲಿ ನಡೆದಿದೆ.

ದಕ್ಷಿಣ ದೆಹಲಿಯ ಲೋಧಿ ಕಾಲೋನಿಯಲ್ಲಿ ನಿರ್ಮಾಣ ಹಂತದ ಕಟ್ಟಡದಲ್ಲಿ ಶನಿವಾರ ರಾತ್ರಿ ಈ ಕ್ರೂರ ಕೃತ್ಯ ಎಸಗಲಾಗಿದೆ. ಕೊಲೆ ಮಾಡಿದ ಆರೋಪದ ಮೇಲೆ ಇಬ್ಬರನ್ನು ಬಂಧಿಸಲಾಗಿದೆ.

ಏನಾಯ್ತು?:ಕಟ್ಟಡ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದ ಇಬ್ಬರು ಕಾರ್ಮಿಕರು ಅಲ್ಲಿಯೇ ಕೆಲಸಕ್ಕಿದ್ದ ಕುಟುಂಬದ 6 ವರ್ಷದ ಬಾಲಕನ ತಲೆ ಕಡಿದಿದ್ದಾರೆ. ಇದನ್ನು ಗಮನಿಸಿದವರು ಪೊಲೀಸರಿಗೆ ದೂರು ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ಅಲ್ಲಿದ್ದ ಕಾರ್ಮಿಕರನ್ನು ಬಂಧಿಸಿದ್ದಾರೆ.

ವಿಚಾರಣೆ ನಡೆಸಿದ ವೇಳೆ ಇಬ್ಬರು ಆರೋಪಿಗಳು ಬಾಲಕನನ್ನು ದೇವರ ಆದೇಶದ ಮೇರೆಗೆ ಕತ್ತು ಕತ್ತರಿಸಿದ್ದೇವೆ ಎಂದು ಹೇಳಿಕೆ ನೀಡಿದ್ದಾರೆ. ಕೊಲೆಯಾದ ಬಾಲಕ ಅದೇ ಕಟ್ಟಡದಲ್ಲಿ ಕೆಲಸದಲ್ಲಿದ್ದ ಉತ್ತರಪ್ರದೇಶ ಮೂಲದ ಕುಟುಂಬಕ್ಕೆ ಸೇರಿದವನಾಗಿದ್ದಾನೆ.

ಆರೋಪಿಗಳು ಮಾದಕದ್ರವ್ಯದ ಅಮಲಿನಲ್ಲಿದ್ದಾಗ ಬಾಲಕನನ್ನು ಅಲ್ಲಿಗೆ ಕರೆಯಿಸಿಕೊಂಡು ಕತ್ತು ಕತ್ತರಿಸಿದ್ದಾರೆ. ಆರೋಪಿಗಳಿಗೂ ಬಾಲಕನ ಪರಿಚಯವಿದ್ದು, ಕುಟುಂಬದೊಂದಿಗೆ ಯಾವುದೇ ದ್ವೇಷ ಇರಲಿಲ್ಲ. ದೇವರು ಕೇಳಿದ್ದ ಎಂದು ಬಾಲಕನನ್ನು ಅಮಾನುಷವಾಗಿ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಓದಿ:ಉಗ್ರ ದಾಳಿ ಸಂಚು, ಪಾಕ್​ ಜೊತೆ ನಂಟು ಹೊಂದಿದ್ದ ಮೂವರ ಬಂಧನ: 4 ಗ್ರೆನೇಡ್, ನಗದು​ ವಶ

ABOUT THE AUTHOR

...view details