ಯಮುನಾನಗರ(ಹರಿಯಾಣ):ಪೆಟ್ರೋಲ್ ಹಾಕಿಸಿಕೊಳ್ಳಲು ಪಂಪ್ಗೆ ಆಗಮಿಸಿದ್ದ ವ್ಯಕ್ತಿಯೊಬ್ಬನ ಮೇಲೆ ಅರ್ಧ ಡಜನ್ಗೂ ಅಧಿಕ ದುಷ್ಕರ್ಮಿಗಳು ದಿಢೀರ್ ಆಗಿ ದಾಳಿ ನಡೆಸಿರುವ ಘಟನೆ ನಡೆದಿದ್ದು, ಇದರ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿವೆ.
ಪೆಟ್ರೋಲ್ ಹಾಕಿಸಿಕೊಳ್ಳಲು ಬಂದ ವ್ಯಕ್ತಿ ಮೇಲೆ ದುಷ್ಕರ್ಮಿಗಳಿಂದ ದಿಢೀರ್ ದಾಳಿ! - Haryana latest news
ಅರ್ಧ ಡಜನ್ಗೂ ಅಧಿಕ ಜನರು ಏಕಾಏಕಿ ಯುವಕನೊಬ್ಬನ ಮೇಲೆ ಪೆಟ್ರೋಲ್ ಪಂಪ್ ಬಳಿ ಹಲ್ಲೆ ನಡೆಸಿರುವ ಘಟನೆ ನಡೆದಿದ್ದು, ಇದರ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿವೆ.
ಹರಿಯಾಣದ ಯಮುನಾನಗರ ಜಗಧ್ರಿಯ ಪೆಟ್ರೋಲ್ ಪಂಪ್ನಲ್ಲಿ ಈ ಘಟನೆ ನಡೆದಿದ್ದು, ಶಕ್ತಿ ನಗರದ ನಿವಾಸಿ ರೋಹಿತ್ ಪೆಟ್ರೋಲ್ ಹಾಕಿಸಿಕೊಳ್ಳಲು ಆಗಮಿಸಿದ್ದನು. ಇದಕ್ಕಿದ್ದಂತೆ ಬೈಕ್ನಿಂದ ಇಳಿದ ಇಬ್ಬರು ಆತನ ಮೇಲೆ ಹಲ್ಲೆ ನಡೆಸಿದ್ದಾರೆ. ಇದರ ಬೆನ್ನಲ್ಲೇ ಮತ್ತೆ ನಾಲ್ವರು ಕೈಯಲ್ಲಿ ಕೋಲು ಹಿಡಿದು ಅಲ್ಲಿಗೆ ಬಂದು ರೋಹಿತ್ ಮೇಲೆ ಹಲ್ಲೆ ನಡೆಸಿದ್ದಾರೆ. ಆಶ್ಚರ್ಯ ಎಂದರೆ ಪೆಟ್ರೋಲ್ ಪಂಪ್ನಲ್ಲಿ ನಿಂತಿದ್ದ ಜನರು ಯುವಕನ ರಕ್ಷಣೆ ಮಾಡಲು ಮುಂದಾಗಿಲ್ಲ. ಘಟನೆಯ ಸಂಪೂರ್ಣ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿವೆ.
ಹಲ್ಲೆಗೊಳಗಾಗಿರುವ ರೋಹಿತ್ ಗಂಭೀರವಾಗಿ ಗಾಯಗೊಂಡಿದ್ದು, ಕ್ಷಣಾರ್ಧದಲ್ಲಿ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದು, ಸಿಸಿಟಿವಿ ದೃಶ್ಯಾವಳಿ ಆಧರಿಸಿ ಆರೋಪಿಗಳಿಗಾಗಿ ಶೋಧಕಾರ್ಯ ನಡೆಸುತ್ತಿದ್ದಾರೆ.