ಕರ್ನಾಟಕ

karnataka

ETV Bharat / bharat

ಉತ್ತರಪ್ರದೇಶ: ಪ್ರವಾಹ ಪೀಡಿತ ಗಂಗಾ ನದಿಯಲ್ಲಿ ದೋಣಿ ಮಗುಚಿ ಆರು ಜನರ ಸಾವು - Etv Bharat Kannada

ಉತ್ತರ ಪ್ರದೇಶದ ಘಾಜಿಪುರ ಜಿಲ್ಲೆಯಲ್ಲಿ ದೋಣಿ ಮಗುಚಿ ಬಿದ್ದು ಆರು ಜನರು ದುರ್ಮರಣ ಹೊಂದಿದ್ದಾರೆ.

6-died-in-ghazipur-boat-accident
ಉತ್ತರ ಪ್ರದೇಶ: ಪ್ರವಾಹ ಪೀಡಿತ ಗಂಗಾ ನದಿಯಲ್ಲಿ ದೋಣಿ ಮಗುಚಿ ಆರು ಜನರ ಸಾವು

By

Published : Sep 1, 2022, 5:48 PM IST

ಘಾಜಿಪುರ (ಉತ್ತರಪ್ರದೇಶ): ಉತ್ತರ ಪ್ರದೇಶದಲ್ಲೂ ಭಾರಿ ಮಳೆ ಸುರಿಯುತ್ತಿದ್ದು, ಪ್ರವಾಹ ಪೀಡಿತ ಗಂಗಾ ನದಿಯಲ್ಲಿ ದೋಣಿ ಮುಳುಗಿ ಆರು ಜನರು ಮೃತಪಟ್ಟಿದ್ದಾರೆ. ಬುಧವಾರ 17 ಜನರಿದ್ದ ದೋಣಿ ಮಗುಚಿ ಬಿದ್ದಿದ್ದು, ಇದುವರೆಗೆ ಆರು ಮೃತ ದೇಹಗಳು ಪತ್ತೆಯಾಗಿದ್ದು, 10 ಮಂದಿಯನ್ನು ರಕ್ಷಿಸಲಾಗಿದೆ. ಮತ್ತೊಬ್ಬ ಹೆಣ್ಣು ಮಗುವಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.

ಘಾಜಿಪುರ ಜಿಲ್ಲೆಯ ಅಥಾಟಾ ಗ್ರಾಮದಲ್ಲಿ ಈ ದುರಂತ ನಡೆದಿದೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಂತ್ರಸ್ತರ ಸ್ಥಳಾಂತರ ಮತ್ತು ಸಂಚಾರಕ್ಕಾಗಿ ಬೋಟ್‌ಗಳನ್ನು ಬಳಸಲಾಗುತ್ತಿದೆ. ಮಗುಚಿ ಬಿದ್ದ ದೋಣಿಯಲ್ಲಿ 25 ಜನರು ಆರಾಮವಾಗಿ ಕುಳಿತುಕೊಳ್ಳಬಹುದು. ಈ ಘಟನೆ ನಡೆದಾಗ ವೃದ್ಧರು, ಮಹಿಳೆಯರು ಮತ್ತು ಮಕ್ಕಳು ಸೇರಿ ಕೇವಲ 17 ಜನರಿದ್ದರು. ಆದರೆ, ಈ ವೇಳೆ ಹಾವು ಕಾಣಿಸಿಕೊಂಡಿದ್ದರಿಂದ ದೋಣಿಯಲ್ಲಿದ್ದವರು ವಿಚಲಿತರಾದರು. ಅಲ್ಲದೇ, ವ್ಯಕ್ತಿಯೊಬ್ಬರು ಗಾಬರಿಗೊಂಡು ಏಕಾಏಕಿ ನೀರಿಗೆ ಹಾರಿದರು. ಇದರಿಂದ ಸಮತೋಲನ ತಪ್ಪಿ ದೋಣಿ ಪಲ್ಟಿಯಾಗಿ ಈ ಅವಘಡ ಸಂಭವಿಸಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ:ಉತ್ತರ ಪ್ರದೇಶದಲ್ಲೂ ಪ್ರವಾಹ: ಬೋಟ್​ನಲ್ಲಿ ತೆರಳಿ ಪರಿಶೀಲನೆ ನಡೆಸಿದ ಸಿಎಂ ಯೋಗಿ

ಸ್ಥಳಕ್ಕೆ ಘಾಜಿಪುರ ಜಿಲ್ಲಾಧಿಕಾರಿ ಮಂಗಳಾ ಪ್ರಸಾದ್ ಸಿಂಗ್ ಭೇಟಿ ನೀಡಿದ್ದು, ಬುಧವಾರ ಸಂಜೆ ಇಬ್ಬರ ಮೃತದೇಹಗಳು ಪತ್ತೆಯಾಗಿವೆ. ಗುರುವಾರ ಮತ್ತೆ ನಾಲ್ಕು ಮೃತದೇಹಗಳು ಪತ್ತೆಯಾಗಿವೆ. ಹೆಣ್ಣು ಮಗುವಿಗಾಗಿ ಹುಡುಕಾಟ ನಡೆಯುತ್ತಿದೆ ಎಂದು ತಿಳಿಸಿದ್ದಾರೆ. ಇತ್ತ, ಕೇಂದ್ರ ಸಚಿವೆ ಅನ್ನಪೂರ್ಣ ದೇವಿ ಈ ಘಟನೆಯಲ್ಲಿ ಮೃತರ ಬಗ್ಗೆ ಸಂತಾಪ ವ್ಯಕ್ತಪಡಿಸಿದ್ದಾರೆ. ಜೊತೆಗೆ ಮೃತರ ಕುಟುಂಬಗಳಿಗೆ ಎಲ್ಲ ರೀತಿಯ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ.

ಸಿಎಂ ಯೋಗಿ ನಿರ್ಗಮನದ ನಂತರ ನಡೆದ ದುರಂತ: ಘಾಜಿಪುರಕ್ಕೆ ಬುಧವಾರ ಸಿಎಂ ಯೋಗಿ ಆದಿತ್ಯನಾಥ್ ಭೇಟಿ ಮಾಡಿ ಪ್ರವಾಹ ಪರಿಸ್ಥಿತಿಯನ್ನು ಅವಲೋಕಿಸಿದ್ದರು. ಆದರೆ, ಅವರು ಅಲ್ಲಿಂದ ನಿರ್ಗಮಿಸಿದ ಕೆಲವು ಗಂಟೆಗಳಲ್ಲೇ ಈ ದೋಣಿ ಅಪಘಾತ ಸಂಭವಿಸಿದೆ.

ಇದನ್ನೂ ಓದಿ:ಸಿಕ್ಕೀಂನಲ್ಲಿ ಭೂಕುಸಿತ.. 70 ಪ್ರವಾಸಿಗರನ್ನು ರಕ್ಷಿಸಿದ ಸೇನೆ

ABOUT THE AUTHOR

...view details