ಹೈದರಾಬಾದ್: ಜನರು ತಮ್ಮ ಹಣವನ್ನು ಪಡೆಯುವ ವ್ಯವಸ್ಥೆಯಲ್ಲಿ ಬದಲಾವಣೆಯಾಗಿ ಐದು ದಶಕಗಳು ಸಂದಿದ್ದು, ಜಗತ್ತಿನ ಮೊಟ್ಟ ಮೊದಲ ಎಟಿಎಂ (ಸ್ವಯಂಚಾಲಿತ ಟೆಲ್ಲರ್ ಯಂತ್ರ) ಇಂದು ತನ್ನ 54ನೇ ಜನ್ಮದಿನವನ್ನ ಆಚರಿಸಿಕೊಳ್ಳುತ್ತಿದೆ. ಜನರ ಜೀವನದ ಅತಿ ಅವಶ್ಯಕ ಭಾಗವಾದ, ಅದರಲ್ಲಿಯೂ ಕೋವಿಡ್-19 ನಂತಹ ಭೀಕರ ಸಮಯದಲ್ಲಿ ಬೆಟ್ಟದಷ್ಟು ಸಹಾಯ ಮಾಡಿದ ಎಟಿಎಂಗೆ ಹುಟ್ಟು ಹಬ್ಬದ ಶುಭಾಶಯಗಳು.
ಹೌದ, 1967ರ ಜೂನ್ 27 ರಂದು ಲಂಡನ್‌ನಲ್ಲಿ ಜಗತ್ತಿನ ಮೊದಲ ಎಟಿಎಂ ಸ್ಥಾಪನೆಯಾಯಿತು. ಲಂಡನ್‌ನ ಎನ್‌ಫೀಲ್ಡ್ ಪ್ರದೇಶದಲ್ಲಿರುವ ಬಾರ್ಕ್ಲೇಸ್ ಬ್ಯಾಂಕಿನ ಶಾಖೆಯಲ್ಲಿ ಎಟಿಎಂನ ಸಾರ್ವಜನಿಕ ಬಳಕೆಗೆ ಅವಕಾಶ ಮಾಡಿಕೊಡಲಾಯಿತು. ಇಂಗ್ಲಿಷ್ ನಟ ರೆಗ್ ವಾರ್ನಿ ಅವರು ಈ ಚೊಚ್ಚಲ ಯಂತ್ರದಿಂದ ಹಣವನ್ನು ಪಡೆದ ಮೊದಲ ವ್ಯಕ್ತಿಯಾಗಿದ್ದಾರೆ.
ಇದೀಗ ಎಟಿಎಂಗಳ ಜಾಲವು ಎಲ್ಲಡೆ ಹರಡಿದ್ದು, ಜಗತ್ತಿನಾದ್ಯಂತ 3.5 ಮಿಲಿಯನ್ ಎಟಿಎಂಗಳು ಚಾಲ್ತಿಯಲ್ಲಿವೆ. ಮೊದಲಿನಂತೆ ಕೆಲಸ-ಕಾರ್ಯ ಬಿಟ್ಟು, ಬ್ಯಾಂಕ್ನಲ್ಲಿ ಸರತಿ ಸಾಲಿನಲ್ಲಿ ಗಂಟೆಗಟ್ಟಲೇ ನಿಂತು ಚಲನ್ಗಳನ್ನ ತುಂಬಿ ನಗದು ಪಡೆಯುವ ಅವಶ್ಯಕತೆಯಿಲ್ಲ. ಬ್ಯಾಂಕ್ನಲ್ಲಿ ಒಂದು ಬಾರಿ ಪಡೆದ ಡೆಬಿಟ್-ಕ್ರಡೆಟ್ ಕಾರ್ಡ್ ಬಳಸಿ ಎಟಿಎಂ ನಲ್ಲಿ ನಾಲ್ಕು-ಅಂಕಿಯ ಪಿನ್ ನಮೂದಿಸಿದರೆ ಸಾಕು ಹಣ ಸಿಗುತ್ತದೆ.