ಔರಂಗಾಬಾದ್(ಬಿಹಾರ): ಬಿಹಾರದ ಔರಂಗಾಬಾದ್ನಲ್ಲಿ ವಿಭಿನ್ನ ಪ್ರೇಮ ವಿವಾಹವೊಂದು ನಡೆದಿದ್ದು, 50 ವರ್ಷದ ವರ 30 ವರ್ಷದ ವಿಧವೆಯ ಕೈಹಿಡಿದಿದ್ದಾನೆ. ಇವರಿಬ್ಬರ ಪ್ರೇಮ ವಿವಾಹ ಇದೀಗ ಹೆಚ್ಚು ಚರ್ಚೆಗೆ ಗ್ರಾಸವಾಗಿದೆ.
ಔರಂಗಾಬಾದ್ ಜಿಲ್ಲೆಯ ಗೋಹ್ ಬ್ಲಾಕ್ನ ರುಕುಂಡಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ವರನಿಗೆ 50 ವರ್ಷವಾಗಿದ್ದು, ವಧುವಿಗೆ 30 ವರ್ಷ ವಯಸ್ಸು. ವಿಶೇಷವೆಂದರೆ ಇಬ್ಬರೂ ಬೇರೆ ಬೇರೆ ಜಾತಿಗೆ ಸೇರಿದವರಾಗಿದ್ದು, ಊರಿನ ಜನರನ್ನ ಒಪ್ಪಿಸಿ, ಮದುವೆ ಮಾಡಿಕೊಂಡಿದ್ದಾರೆ. ಈ ನವಜೋಡಿ ನೋಡಲು ಇದೀಗ ಜನಸಾಗರವೇ ಹರಿದು ಬಂದಿದೆ.
30 ವರ್ಷದ ವಿಧವೆಯ ಕೈ ಹಿಡಿದ 50 ವರ್ಷದ ವರ ರುಕುಂಡಿ ಗ್ರಾಮದ 50 ವರ್ಷದ ಶಿವಬರತ್ ಪಾಸ್ವಾನ್ ಅವರ ಪತ್ನಿ ಮೃತಪಟ್ಟಿದ್ದು, ಗಯಾ ಜಿಲ್ಲೆಯ ಶೇರ್ಘಾಟಿ ನಿವಾಸಿಯಾಗಿರುವ 30 ವರ್ಷದ ರಮ್ಮಣಿ ದೇವಿ ಗಂಡ ಸಹ ಸಾವನ್ನಪ್ಪಿದ್ದಾನೆ. ಇಬ್ಬರು ಹಸ್ಪುರ್ ಬ್ಲಾಕ್ನ ಟೆಟ್ರಾಹಿ ಗ್ರಾಮದಲ್ಲಿ ಕೂಲಿ ಕೆಲಸ ಮಾಡ್ತಿದ್ದರು. ಈ ಸಮಯದಲ್ಲಿ ಇಬ್ಬರು ಪರಸ್ಪರ ಇಷ್ಟಪಡಲು ಶುರು ಮಾಡಿದ್ದು, ಮದುವೆ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ.
ಇದನ್ನೂ ಓದಿರಿ:ಒಮಿಕ್ರಾನ್ ಹರಡಲು ಕಾರಣವಾಯ್ತಾ ದೆಹಲಿ ಮ್ಯಾರೇಜ್ ಪಾರ್ಟಿ... ಐವರ ಟ್ರಾವೆಲ್ ಹಿಸ್ಟರಿ ಹೀಗಿದೆ ನೋಡಿ!
ಇದಕ್ಕೆ ಸಂಬಂಧಿಸಿದಂತೆ ತಾವು ಕೆಲಸ ಮಾಡುತ್ತಿದ್ದ ಮಾಲೀಕ ಉಪೇಂದ್ರ ಸಿಂಗ್ ಅವರಿಗೆ ಮಾಹಿತಿ ನೀಡಿದ್ದಾರೆ. ಆದರೆ ಆರಂಭದಲ್ಲಿ ಇದಕ್ಕೆ ಜಾತಿ ಅಡ್ಡ ಬಂದಿದೆ. ಆದರೆ ತದನಂತರ ಜನರನ್ನ ಒಪ್ಪಿಸಿದ್ದಾರೆ. ಈ ವೇಳೆ ಎರಡು ಗ್ರಾಮಸ್ಥರು ಮುಂದೆ ನಿಂತು ಸೂರ್ಯನ ದೇವಾಲಯದಲ್ಲಿ ಅದ್ಧೂರಿಯಾಗಿ ಮದುವೆ ಮಾಡಿದ್ದಾರೆ.