ದೋಣಿ ಮಗುಚಿ ಒಂದೇ ಕುಟುಂಬದ ಐವರ ದುರ್ಮರಣ - ಕಲೆಕ್ಟರ್ ಅವಧೇಶ್ ಶರ್ಮಾ ಮಾಹಿತಿ
18:51 December 02
ದೋಣಿ ಮಗುಚಿ ಒಂದೇ ಕುಟುಂಬದ ಐವರ ದುರ್ಮರಣ
ಭೋಪಾಲ್ (ಮಧ್ಯಪ್ರದೇಶ): ದೋಣಿ ಮಗುಚಿ ಒಂದೇ ಕುಟುಂಬದ ಐವರ ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದ ಅಗರ್ ಮಾಳ್ವಾ ಜಿಲ್ಲೆಯ ಟಿಲ್ಲರ್ ಅಣೆಕಟ್ಟಿನಲ್ಲಿ ನಡೆದಿದೆ.
ಕಾನಡ್ ಠಾಣಾ ವ್ಯಾಪ್ತಿಯ ಲಖ್ಖೇರಿ ಗ್ರಾಮದಲ್ಲಿರುವ ಅಣೆಕಟ್ಟಿನಲ್ಲಿ ದುರ್ಘಟನೆ ಸಂಭವಿಸಿದ್ದು, ಎರಡು ಮೃತದೇಹಗಳನ್ನು ಪೊಲೀಸರು ಹೊರ ತೆಗೆದಿದ್ದಾರೆ. ಉಳಿದ ಮೂರು ಮೃತದೇಹಗಳಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.
ನಾಲ್ವರು ಮಹಿಳೆಯರು ಹಾಗೂ ಓರ್ವ ಬಾಲಕನ ಮೃತಪಟ್ಟಿದ್ದು, ಅವರೆಲ್ಲರೂ ದೇವಾಲಯಕ್ಕೆ ತೆರಳಲು ದೋಣಿಯಲ್ಲಿ ತೆರಳುತ್ತಿದ್ದರು ಎನ್ನಲಾಗಿದೆ. ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದೆ ಕಲೆಕ್ಟರ್ ಅವಧೇಶ್ ಶರ್ಮಾ ಸ್ಪಷ್ಟನೆ ನೀಡಿದ್ದಾರೆ.