ತಿರುಪುರ್ (ತಮಿಳುನಾಡು):ತಮಿಳುನಾಡಿನ ಪಲ್ಲಡಂ ಸಮೀಪದ ಕಲ್ಲಗಿನಾರು ಗ್ರಾಮದಲ್ಲಿ ಒಂದೇ ಕುಟುಂಬದ ನಾಲ್ವರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಪ್ರಕರಣ ಭಾನುವಾರ ನಡೆದಿದೆ. ಪಲ್ಲಡಂ ಸಮೀಪದ ಕಲ್ಲಗಿನಾರು ಗ್ರಾಮದ ನಿವಾಸಿ ಸೆಂಥಿಲ್‌ಕುಮಾರ್ ಹೊಟ್ಟಿನ ವ್ಯಾಪಾರ ಮಾಡುತ್ತಿದ್ದರು. ಹಣದ ವಿಚಾರದ ಹಿನ್ನೆಲೆ ತೂತುಕುಡಿ ಜಿಲ್ಲೆಯ ವೆಂಕಟೇಶನನ್ನು ಕೆಲಸದಿಂದ ತೆಗೆದುಹಾಕಿದ್ದರು.
ಈ ಪ್ರಕರಣದಲ್ಲಿ ತೂತುಕುಡಿ ಜಿಲ್ಲೆಯ ವೆಂಕಟೇಶನ್ ಅಲಿಯಾಸ್ ಕುಟ್ಟಿ ಎಂಬಾತ ಕೆಲವು ತಿಂಗಳ ಹಿಂದೆ ಸೆಂಥಿಲ್‌ಕುಮಾರ್ ಬಳಿ ಚಾಲಕನಾಗಿ ಕೆಲಸ ಮಾಡುತ್ತಿದ್ದ. ನಿನ್ನೆ ಸೆಂಥಿಲ್‌ಕುಮಾರ್ ಅವರ ಮನೆ ಬಳಿ ವೆಂಕಟೇಶ ಹಾಗೂ ಆತನ ಸಹಚರರು ಮದ್ಯ ಸೇವಿಸುತ್ತಿದ್ದರು. ಈ ವೇಳೆ ಸೆಂಥಿಲ್‌ಕುಮಾರ್ ಅವರು, ನಮ್ಮ ಮನೆ ಬಳಿ ಕುಳಿತು ಏಕೆ ಮದ್ಯ ಸೇವಿಸುತ್ತಿದ್ದೀರಿ ಎಂದು ಪ್ರಶ್ನಿಸಿದ್ದಾರೆ. ಸೆಂಥಿಲ್‌ಕುಮಾರ್ ಹಾಗೂ ಪಾನಮತ್ತ ಮೂವರ ನಡುವೆ ಗಲಾಟೆ ನಡೆದಿದೆ.
ಇದರಿಂದ ಕುಪಿತಗೊಂಡ ಪಾನಮತ್ತ ದುಷ್ಕರ್ಮಿಗಳು ಕುಡುಗೋಲಿನಿಂದ ಸೆಂಥಿಲ್‌ಕುಮಾರ್ ಕೊಚ್ಚಿ ಕೊಲೆ ಮಾಡಿದ್ದಾರೆ. ಸೆಂಥಿಲ್‌ಕುಮಾರ್‌ನನ್ನು ಕುಡುಗೋಲಿನಿಂದ ಕಡಿಯುತ್ತಿದ್ದನ್ನು ತಡೆಯಲು ಯತ್ನಿಸಿದ ಮೋಹನರಾಜ್, ಪುಷ್ಬಾವತಿ, ರತ್ನಾಂಬಳ್ ಮೇಲೆಯೂ ಮಾರಣಾಂತಕ ಹಲ್ಲೆ ನಡೆಸಿದ್ದಾರೆ. ಪರಿಣಾಮ ಒಂದೇ ಕುಟುಂಬದ ನಾಲ್ವರನ್ನು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬಳಿಕ ನಡೆಸಿ ಮೂವರ ಗ್ಯಾಂಗ್ ಸ್ಥಳದಿಂದ ಓಡಿ ಹೋಗಿದೆ. ಸ್ಥಳೀಯರು ಕೊಲೆ ಮಾಡಿದ ಮೂವರನ್ನು ಹಿಡಿಯಲು ಯತ್ನಿಸಿದ್ದಾರೆ. ಆದ್ರೆ, ಆರೋಪಿಗಳು ಪರಾರಿಯಾಗಿದ್ದಾರೆ.
ಪೊಲೀಸರಿಂದ ತೀವ್ರಗೊಂಡ ತನಿಖೆ:ಕೊಲೆ ಪ್ರಕರಣದ ವಿಷಯ ತಿಳಿದ ಪಲ್ಲಡಂ ಡಿಎಸ್‌ಪಿ ಸೌಮ್ಯಾ ನೇತೃತ್ವದಲ್ಲಿ ಪೊಲೀಸರು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲಿಸಿದರು. ನಾಲ್ವರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಪಲ್ಲಡಂ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ತಿರುಪುರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಾಮಿನಾಥನ್ ಮತ್ತು ಉಪ ಪೊಲೀಸ್ ವರಿಷ್ಠಾಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ವಿಧಿವಿಜ್ಞಾನ ಪ್ರಯೋಗಾಲಯ ತಜ್ಞರ ಸಹಾಯದಿಂದ ಕೊಲೆ ನಡೆದ ಸ್ಥಳದಲ್ಲಿ ತೀವ್ರ ತನಿಖೆ ನಡೆಸುತ್ತಿದೆ.
ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ರಸ್ತೆ ತಡೆ:ಒಂದೇ ಕುಟುಂಬದ ನಾಲ್ವರನ್ನು ಹತ್ಯೆ ಮಾಡಿದವರನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು, ಕೊಯಮತ್ತೂರು-ತಿರುಚ್ಚಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸರ್ಕಾರಿ ಆಸ್ಪತ್ರೆ ಮುಂಭಾಗದಲ್ಲಿ ರಸ್ತೆ ತಡೆ ನಡೆಸಿದರು. ಇದರಿಂದಾಗಿ ಕೊಯಮತ್ತೂರು-ತಿರುಚ್ಚಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿದೆ. ಪಲ್ಲಡಂನಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ಪಶ್ಚಿಮ ವಲಯ ಐಜಿಯಿಂದ ಪರಿಶೀಲನೆ:ಪಶ್ಚಿಮ ವಲಯ ಐಜಿ ಭವಾನೀಶ್ವರಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಕೊಲೆಗೆ ಹಳೆ ವೈಷಮ್ಯವೇ ಕಾರಣವೆಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಕೊಲೆಗೆ ನಿಖರವಾದ ಕಾರಣವೇನು ಎಂಬುದರ ಕುರಿತ ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ, ಚಾಲಕ ಕುಟ್ಟಿ ಅಲಿಯಾಸ್ ವೆಂಕಟೇಶನ್, ಸೆಂಥಿಲ್‌ಕುಮಾರ್ ಅವರ ಕಿರಿಯ ಸಹೋದರ ಮೋಹನ್ ರಾಜ್ ಬಳಿ ಬಡ್ಡಿಗೆ ಹಣ ಪಡೆದಿರುವುದು ಪತ್ತೆಯಾಗಿದೆ. ಈ ಸಂಬಂಧ ಪೊಲೀಸರು ವೆಂಕಟೇಶನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಈ ವೇಳೆ ಒಂದೇ ಕುಟುಂಬದ ಇಬ್ಬರು ಮಹಿಳೆಯರು ಸೇರಿದಂತೆ ನಾಲ್ವರನ್ನು ಕುಡುಗೋಲಿನಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಪಲ್ಲಡಂ ಭಾಗದಲ್ಲಿ ಆತಂಕಕ್ಕೆ ಕಾರಣವಾಗಿದೆ.
ಇದನ್ನೂ ಓದಿ:ಮಗಳಿಗೆ ಕಿರುಕುಳ ನೀಡುತ್ತಿದ್ದ ಯುವಕರಿಬ್ಬರನ್ನು ಕೊಂದು ಮೂಟೆ ಕಟ್ಟಿದ ತಂದೆ!