ಕರ್ನಾಟಕ

karnataka

ETV Bharat / bharat

ಆಪ್ ಅಧಿಕಾರಕ್ಕೆ ಬಂದರೆ ಪ್ರತೀ ತಿಂಗಳು 300 ಯುನಿಟ್ ವಿದ್ಯುತ್ ಉಚಿತ: ಕೇಜ್ರಿವಾಲ್ ಘೋಷಣೆ

ದೆಹಲಿಯಲ್ಲಿ ಪ್ರತೀ ಕುಟುಂಬಕ್ಕೆ ಉಚಿತವಾಗಿ 200 ಯುನಿಟ್​ ವಿದ್ಯುತ್ ನೀಡಿದಂತೆ ಪಂಜಾಬ್​ನಲ್ಲಿಯೂ ನೀಡಲಾಗುವುದು ಎಂದು ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್ ಘೋಷಿಸಿದ್ದು, ಮುಂಬರುವ ವಿಧಾನಸಭೆ ಚುನಾವಣೆಗೆ ಸಿದ್ಧತೆ ನಡೆಸಿದ್ದಾರೆ.

ಕೇಜ್ರಿವಾಲ್
ಕೇಜ್ರಿವಾಲ್

By

Published : Jun 29, 2021, 5:12 PM IST

ಚಂಡೀಗಢ: ಮುಂದಿನ ವರ್ಷ ನಡೆಯಲಿರುವ ಪಂಜಾಬ್ ವಿಧಾನಸಭಾ ಚುನಾವಣೆಗೆ ಈಗಲೇ ಸಿದ್ಧತೆ ಆರಂಭವಾಗಿದೆ. ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಪಂಜಾಬ್ ಚುನಾವಣೆ ಮೇಲೆ ಕಣ್ಣಿಟ್ಟಿದ್ದು, ಪಂಜಾಬ್​​​​​​ನಲ್ಲಿ ಪಕ್ಷ ಗೆದ್ದರೆ ಪ್ರತಿ ತಿಂಗಳು ಉಚಿತವಾಗಿ 300 ಯುನಿಟ್​ ವಿದ್ಯುತ್ ನೀಡುವುದಾಗಿ ಘೋಷಿಸಿದ್ದಾರೆ.

ಇದಲ್ಲದೇ ಆಪ್ ನಾಯಕ ಇನ್ನಷ್ಟು ಆಫರ್ ನೀಡಿದ್ದಾರೆ. ಪಕ್ಷ ಆಡಳಿತಕ್ಕೆ ಬಂದರೆ ಪಂಜಾಬ್​​ನಲ್ಲಿ ದಿನದ 24 ಗಂಟೆಯೂ ತಡೆರಹಿತ ವಿದ್ಯುತ್ ಸರಬರಾಜು ಮತ್ತು ಬಾಕಿ ಉಳಿದಿರುವ ವಿದ್ಯುತ್ ಬಿಲ್​​ ಮನ್ನಾ ಮಾಡುವುದಾಗಿಯೂ ಘೋಷಿಸಿದ್ದಾರೆ.

ದೆಹಲಿಯ ಪ್ರತೀ ಕುಟುಂಬಕ್ಕೆ ನಾವು ಉಚಿತವಾಗಿ 200 ಯುನಿಟ್ ವಿದ್ಯುತ್ ನೀಡುತ್ತಿದ್ದೇವೆ. ಅಲ್ಲಿನ ಮಹಿಳೆಯರು ಹೆಚ್ಚು ಸಂತಸದಿಂದಿದ್ದಾರೆ. ಆದರೆ, ಪಂಜಾಬ್​​ನಲ್ಲಿನ ದರ ಏರಿಕೆಯಿಂದಾಗಿ ಮಹಿಳೆಯರು ಆಕ್ರೋಶಗೊಂಡಿದ್ದಾರೆ. ಆಪ್​ ಪಂಜಾಬ್​ನಲ್ಲೂ ಉಚಿತ ವಿದ್ಯುತ್ ನೀಡಲಿದೆ ಎಂದು ಸಿಎಂ ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.

ಓದಿ:ಸೆಂಟ್ರಲ್​​ ವಿಸ್ತಾ ಪ್ರಾಜೆಕ್ಟ್ ​: ಪ್ರಶ್ನಾರ್ಹ PILಗಳು ವ್ಯವಸ್ಥೆಗೆ ಸಮಸ್ಯೆ ಎಂದ ಸುಪ್ರೀಂಕೋರ್ಟ್‌

ABOUT THE AUTHOR

...view details