ಕರ್ನಾಟಕ

karnataka

ETV Bharat / bharat

ಮದುವೆಗೆ ಹೊರಟವರು ಮಸಣಕ್ಕೆ: ಕಾಲುವೆಗೆ ಬಿದ್ದ ಕಾರು ಒಂದೇ ಕುಟುಂಬದ ಮೂವರು ಮಹಿಳೆಯರ ಸಾವು - ಮದುವೆಗೆ ಹೊರಟವರು ಮಸಣಕ್ಕೆ

ಕಾರು ಪಲ್ಟಿಯಾಗಿ ಕಾಲುವೆಗೆ ಬಿದ್ದ ಪರಿಣಾಮ ಒಂದೇ ಕುಟುಂಬದ ಮೂವರು ಮಹಿಳೆಯರು ಸಾವನ್ನಪ್ಪಿರುವ ಘಟನೆ ಪತ್ತನಂತಿಟ್ಟ ಜಿಲ್ಲೆಯ ಆಡೂರಿನಲ್ಲಿ ನಡೆದಿದೆ.

ಕಾಲುವೆಗೆ ಬಿದ್ದ ಕಾರು
ಕಾಲುವೆಗೆ ಬಿದ್ದ ಕಾರು

By

Published : Feb 9, 2022, 7:12 PM IST

Updated : Feb 9, 2022, 8:49 PM IST

ಪತ್ತನಂತಿಟ್ಟ (ಕೇರಳ ): ಮದುವೆಗೆ ಹೋಗುತ್ತಿದ್ದ ವೇಳೆ ಕಾರು ಪಲ್ಟಿಯಾಗಿ ಕಾಲುವೆಗೆ ಬಿದ್ದ ಪರಿಣಾಮ ಒಂದೇ ಕುಟುಂಬದ ಮೂವರು ಮಹಿಳೆಯರು ಸಾವನ್ನಪ್ಪಿರುವ ಘಟನೆ ಪತ್ತನಂತಿಟ್ಟ ಜಿಲ್ಲೆಯ ಆಡೂರಿನಲ್ಲಿ ನಡೆದಿದೆ. ಇನ್ನು ವಾಹನದಲ್ಲಿ ಒಟ್ಟು 7 ಜನ ಪ್ರಯಾಣಿಸುತ್ತಿದ್ದು, ಚಾಲಕ ಸೇರಿದಂತೆ ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದು, ಸಣ್ಣಪುಟ್ಟ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಒಂದೇ ಕುಟುಂಬದ ಮೂವರು ಮಹಿಳೆಯರ ಸಾವು

ಮೃತರು ಕೊಲ್ಲಂ ಜಿಲ್ಲೆಯ ಆಯುರ್ ಮೂಲದವರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಅತಿವೇಗದ ಚಾಲನೆಯೇ ಈ ಅವಘಡಕ್ಕೆ ಕಾರಣ ಎಂದು ಹೇಳಿದ್ದಾರೆ. ಅತಿ ವೇಗದಿಂದ ಬಂದ ಕಾರು ಆಡೂರ್ ಬೈಪಾಸ್ ಬಳಿ ಪಲ್ಟಿಯಾಗಿ ಕಾಲುವೆಗೆ ಧುಮುಕಿದ್ದರಿಂದ ಈ ಘಟನೆ ಸಂಭವಿಸಿದೆ.

ಕಾಲುವೇಯಲ್ಲಿ ನೀರಿನ ಹರಿವು ಜೋರಾಗಿದ್ದರಿಂದ ವಾಹನವು ಸ್ವಲ್ಪ ದೂರದವರೆಗೆ ಹರಿದಿದೆ. ಅಗ್ನಿಶಾಮಕ ಮತ್ತು ರಕ್ಷಣಾ ಸಿಬ್ಬಂದಿ ಸ್ಥಳೀಯರ ಸಹಾಯದಿಂದ ನಾಲ್ವರನ್ನು ರಕ್ಷಿಸಿ ಹತ್ತಿರದ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ, ಮೂವರು ಮಹಿಳೆಯರು ತೀವ್ರವಾಗಿ ಗಾಯಗೊಂಡ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ : ಮತ ಸೆಳೆಯಲು ಉತ್ತರಾಖಂಡ ಮಾಜಿ ಸಿಎಂ ರಾವತ್​ 'ಸಾಮಾನ್ಯ' ತಂತ್ರ.. ಮಗು ಎತ್ತಿಕೊಂಡು ಪ್ರಚಾರ


Last Updated : Feb 9, 2022, 8:49 PM IST

ABOUT THE AUTHOR

...view details