ಕರ್ನಾಟಕ

karnataka

ETV Bharat / bharat

ಇಲಿ ಸಾಯಲೆಂದು ಪಾಷಾಣ ಇಟ್ಟ.. ಭತ್ತದ ಹೊಲದಲ್ಲಿ 21 ನವಿಲುಗಳ ದುರ್ಮರಣ.. ರೈತನ ಬಂಧನ.. - ತಿರುಪ್ಪತ್ತೂರಿನಲ್ಲಿ ನವಿಲುಗಳು ಸಾವು

ಇಲಿಗಳು ಭತ್ತದ ಹೊಲದಲ್ಲಿ ಹಾನಿ ಮಾಡುತ್ತಿದ್ದ ಕಾರಣದಿಂದ ಆಹಾರದಲ್ಲಿ ವಿಷ ಬೆರೆಸಿ ಹೊಲದಲ್ಲಿ ತಂದಿಟ್ಟಿದ್ದ. ಈ ವಿಷವನ್ನು ಸೇವಿಸಿ 21 ನವಿಲುಗಳು ಸಾವನ್ನಪ್ಪಿವೆ..

21 peacocks died near Tiruppattur:  a farmer has arrested
ಭತ್ತದ ಹೊಲದಲ್ಲಿ 21 ನವಿಲುಗಳು ಸಾವು: ರೈತನ ಬಂಧನ

By

Published : Mar 13, 2022, 6:47 AM IST

ತಿರುಪ್ಪತ್ತೂರು, ತಮಿಳುನಾಡು :ಭತ್ತದ ಹೊಲದಲ್ಲಿ ಇಲಿಗಳ ನಿಯಂತ್ರಣಕ್ಕೆ ಇಟ್ಟಿದ್ದ ವಿಷಾಹಾರವನ್ನು ಸೇವಿಸಿ ಸುಮಾರು 21 ನವಿಲುಗಳು ಸಾವನ್ನಪ್ಪಿರುವ ಘಟನೆ ತಮಿಳುನಾಡಿನ ತಿರುಪ್ಪತ್ತೂರು ಎಂಬಲ್ಲಿ ನಡೆದಿದೆ. ಇಲಿ ಪಾಷಾಣ ಇರಿಸಿದ್ದ ರೈತನನ್ನು ಪೊಲೀಸರುಬಂಧಿಸಿದ್ದಾರೆ.

ಕುರುಂಪಟ್ಟಿ ಪ್ರದೇಶಕ್ಕೆ ಸೇರಿದ 71 ವರ್ಷದ ರೈತ ಷಣ್ಮುಗಂ ಎಂಬಾತ ಬಂಧಿತ ಆರೋಪಿ. ಈ ರೈತ ತಾನು ಗುತ್ತಿಗೆ ಪಡೆದ ಜಮೀನಿನಲ್ಲಿ ಭತ್ತವನ್ನ ಬೆಳೆಯುತ್ತಿದ್ದ.

ಇಲಿಗಳು ಭತ್ತದ ಹೊಲದಲ್ಲಿ ಹಾನಿ ಮಾಡುತ್ತಿದ್ದ ಕಾರಣದಿಂದ ಆಹಾರದಲ್ಲಿ ವಿಷ ಬೆರೆಸಿ ಹೊಲದಲ್ಲಿ ತಂದಿಟ್ಟಿದ್ದ. ಈ ವಿಷವನ್ನು ಸೇವಿಸಿ 21 ನವಿಲುಗಳು ಸಾವನ್ನಪ್ಪಿವೆ.

ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಅಲ್ಲಿಗೆ ಆಗಮಿಸಿ ನವಿಲುಗಳ ಕಳೆಬರಗಳನ್ನು ಹೊರತೆಗೆದು ರೈತ ಷಣ್ಮುಗಂನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಈ ಕುರಿತಂತೆ ತನಿಖೆ ಮುಂದುವರೆದಿದೆ.

ಇದನ್ನೂ ಓದಿ:ರಜೆಯ ಮೇಲೆ ಬಂದಿದ್ದ ಯೋಧನನ್ನು ಗುಂಡಿಕ್ಕಿ ಕೊಂದ ಭಯೋತ್ಪಾದಕರು

ABOUT THE AUTHOR

...view details