ನವದೆಹಲಿ:ದೆಹಲಿಯ ಛಾವಾಲಾ ಪ್ರದೇಶದಲ್ಲಿ 2012 ರಲ್ಲಿ 19 ವರ್ಷದ ಯುವತಿ ಮೇಲೆ ಅತ್ಯಾಚಾರ ಎಸಗಿ ಹತ್ಯೆ ಮಾಡಿದ ಪ್ರಕರಣದಲ್ಲಿ ಮರಣದಂಡನೆಗೆ ಗುರಿಯಾಗಿದ್ದ ಮೂವರು ಆರೋಪಿಗಳನ್ನು ಸುಪ್ರೀಂಕೋರ್ಟ್ ಖುಲಾಸೆ ಮಾಡಿ, ದೆಹಲಿ ಹೈಕೋರ್ಟ್ ನೀಡಿದ ಆದೇಶವನ್ನು ರದ್ದು ಮಾಡಿದೆ.
10 ವರ್ಷಗಳ ಹಿಂದೆ 19 ವರ್ಷದ ಯುವತಿಯೊಬ್ಬಳನ್ನು ಅಪಹರಿಸಿದ್ದ ಮೂವರು ಆಕೆಯ ಮೇಲೆ ಪೈಶಾಚಿಕ ಕೃತ್ಯ ಎಸಗಿ ಬಳಿಕ, ಕಬ್ಬಿಣದ ರಾಡು ಮತ್ತು ಕಲ್ಲಿನಿಂದ ಜಜ್ಜಿ ಬರ್ಬರವಾಗಿ ಹತ್ಯೆ ಮಾಡಿದ್ದರು ಎಂದು ಆಪಾದಿಸಲಾಗಿತ್ತು. ಬಳಿಕ ಶವವನ್ನು ಹರಿಯಾಣದ ರೇವಾರಿ ಜಿಲ್ಲೆಯ ಗ್ರಾಮವೊಂದರ ಹೊಲದಲ್ಲಿ ಬಿಸಾಡಿ ಪರಾರಿಯಾಗಿದ್ದರು ಎಂದು ದೂರು ನೀಡಲಾಗಿತ್ತು.