ಪಣಜಿ: ಗೋವಾದ ಬೆನೌಲಿಮ್ ಕಡಲತೀರದಲ್ಲಿ ಇಬ್ಬರು ಅಪ್ರಾಪ್ತ ಬಾಲಕಿಯರ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ. ಈ ಪ್ರಕರಣ ಸಂಬಂಧ ಅಲ್ಲಿನ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಮಾತನಾಡಿದ್ದು, ತಮ್ಮ ಹೆಣ್ಣುಮಕ್ಕಳು ಏಕೆ ರಾತ್ರಿಯಿಡೀ ಹೊರಗೆ ಹೋಗುತ್ತಾರೆ ಎಂಬುದನ್ನು ಪೋಷಕರು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.
ರಾತ್ರಿ ತಿರುಗಾಡುವ ನಿಮ್ಮ ಹೆಣ್ಣು ಮಕ್ಕಳನ್ನು ಪ್ರಶ್ನಿಸಿ, ಸರ್ಕಾರವನ್ನಲ್ಲ: ಗೋವಾ ಸಿಎಂ
ಗೋವಾದ ಬೆನೌಲಿಮ್ ಕಡಲತೀರದಲ್ಲಿ ಇಬ್ಬರು ಅಪ್ರಾಪ್ತ ಬಾಲಕಿಯರ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣ ಭಾರಿ ಸಂಚಲನ ಸೃಷ್ಟಿಸಿದೆ.
ಗೋವಾದಲ್ಲಿ ಇಬ್ಬರು ಅಪ್ರಾಪ್ತೆಯರ ಮೇಲೆ ಸಾಮೂಹಿಕ ಅತ್ಯಾಚಾರ ಕೇಸ್; ಸಿಎಂ ಸಾವಂತ್ ಉತ್ತರ ಹೀಗಿತ್ತು...
ನಿನ್ನೆ ಸದನದಲ್ಲಿ ಗಮನ ಸೆಳೆಯುವ ನೋಟಿಸ್ ಕುರಿತ ಚರ್ಚೆಯಲ್ಲಿ ಸಾವಂತ್, 14 ವರ್ಷದ ಮಕ್ಕಳು ಇಡೀ ರಾತ್ರಿ ಬೀಚ್‌ನಲ್ಲಿದ್ದಾಗ ಪೋಷಕರು ಈ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ಮಕ್ಕಳನ್ನು ಕಾರಣ ಕೇಳದೆ ನಾವು ಸರ್ಕಾರ ಮತ್ತು ಪೊಲೀಸರ ಮೇಲೆ ಜವಾಬ್ದಾರಿಯನ್ನು ಹೊರಿಸಲು ಸಾಧ್ಯವಿಲ್ಲ ಎಂದಿದ್ದಾರೆ. ತಮ್ಮ ಮಕ್ಕಳ ಸುರಕ್ಷತೆಯನ್ನು ಖಾತರಿಪಡಿಸುವ ಜವಾಬ್ದಾರಿ ಪೋಷಕರ ಮೇಲಿದೆ. ತಮ್ಮ ಮಕ್ಕಳನ್ನು ವಿಶೇಷವಾಗಿ ಅಪ್ರಾಪ್ತ ವಯಸ್ಕರನ್ನು ರಾತ್ರಿ ವೇಳೆ ಹೊರಗೆ ಹೋಗಲು ಅನುಮತಿ ನೀಡಬಾರದು ಎಂದು ಮುಖ್ಯಮಂತ್ರಿ ಹೇಳಿದ್ದಾರೆ.