ಪೂರ್ವ ಗೋದಾವರಿ (ಆಂಧ್ರಪ್ರದೇಶ): ಗೋದಾವರಿ ನದಿಯಲ್ಲಿ ಕಂಡುಬರುವ ಅಪರೂಪದ ಪುಲಸಾ ಮೀನು ಭರ್ಜರಿ ಬೆಲೆಗೆ ಬಿಕರಿಯಾಗಿದೆ. ಕೇವಲ 2 ಕೆಜಿಯ ಮೀನು 19 ಸಾವಿರ ರೂಪಾಯಿಗೆ ಮಾರಾಟ ಮಾಡಲಾಗಿದೆ.
ಬೇರೆ ಮೀನುಗಳಿಗಿಂತ ಭಿನ್ನ ರುಚಿಯನ್ನು ಪುಲಸಾ ಮೀನು ಹೊಂದಿದೆ. ಈ ಮೀನು ಸಿಕ್ಕರೆ ಮೀನುಗಾರರಿಗೆ ಸುಗ್ಗಿಯಂತೆ. ಅದರಲ್ಲೂ ಪೂರ್ವ ಗೋದಾವರಿ ಜಿಲ್ಲೆಯ ಯಾನಂ ಮಾರುಕಟ್ಟೆಯಲ್ಲಿ ಪುಲಸಾಗೆ ಭಾರಿ ಬೇಡಿಕೆ ಇದೆ.
ಇದೀಗ ನದಿ ಪ್ರವಾಹ ಇಳಿಮುಖವಾಗುತ್ತಿದ್ದಂತೆ ಯಾನಂ ಮಾರುಕಟ್ಟೆಗೆ ಈ ಪ್ರಭೇದದ ಮೀನು ಆಗಮನವಾಗಿದ್ದು, ಮಂಗಳವಾರ ಮೀನನ್ನು ಹರಾಜು ಮೂಲಕ ಮಾರಾಟ ಮಾಡಲಾಯಿತು. ನಾಟಿ ಪಾರ್ವತಿ ಎಂಬ ಮಹಿಳೆಯ ಬಳಿಯಿದ್ದ 2 ಕೆಜಿ ತೂಕದ ತಾಜಾ ಪುಸಲಾ ಮೀನನ್ನು ಭೈರವಪಾಳ್ಯದ ನಿವಾಸಿಯೊಬ್ಬರು 19 ಸಾವಿರ ರೂ. ಕೊಟ್ಟು ಖರೀದಿಸಿದರು.
ಈ ಸೀಸನ್‌ನಲ್ಲಿ ಪುಲಸಾ ಮೀನಿಗೆ ಸಿಕ್ಕಿರುವ ಗರಿಷ್ಠ ಬೆಲೆ ಇದಾಗಿದೆ. ಈ ಭಾಗದಲ್ಲಿ ಇತ್ತೀಚೆಗೆ ಮರಳು ದಂಧೆ ಹೆಚ್ಚಾಗಿದ್ದು ಮೀನು ಸಿಗುವುದು ಕಡಿಮೆಯಾಗಿದೆ ಎನ್ನುತ್ತಾರೆ ಸ್ಥಳೀಯ ಮೀನುಗಾರರು.
ಇದನ್ನೂ ಓದಿ:ಉಡುಪಿ : ಹವ್ಯಾಸಿ ಮೀನುಗಾರನ ಗಾಳಕ್ಕೆ ಬಿದ್ದ ಬೃಹತ್ ಗಾತ್ರದ ಮುರು, ಕೊಕ್ಕರ್