ಕರ್ನಾಟಕ

karnataka

ETV Bharat / bharat

1998 ವಂಧಮಾ ಹತ್ಯಾಕಾಂಡ: ಆ ರಾತ್ರಿ ಮುಸುಕುಧಾರಿಗಳಿಂದ ನಡೆದಿತ್ತು 23 ಕಾಶ್ಮೀರಿ ಪಂಡಿತರ ನರಮೇಧ!

ನಾಲ್ಕು ಪಂಡಿತ್ ಕುಟುಂಬಗಳಿಗೆ ಸೇರಿದ 24 ಸದಸ್ಯರಲ್ಲಿ 23 ಜನರು ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಸಮುದಾಯದ ಏಕಾಂಗಿ ಸದಸ್ಯ ಅಶು (ಆಗ 14 ವರ್ಷ ವಯಸ್ಸು) ಮಾರಣಾಂತಿಕ ಹಲ್ಲೆಯಿಂದ ಪಾರಾಗಿದ್ದ. ಹತ್ಯೆಯಾದವರಲ್ಲಿ ನಾಲ್ಕು ಕುಟುಂಬಗಳ ಸದಸ್ಯರು ಮತ್ತು ಜಮ್ಮುವಿನಿಂದ ಭೇಟಿ ನೀಡಲು ಬಂದ ಕನಿಷ್ಠ ಐದು ಅತಿಥಿಗಳು ಇದ್ದರು.

ಆ ರಾತ್ರಿ 23 ಕಾಶ್ಮೀರಿ ಪಂಡಿತರನ್ನು ಮುಸುಕುದಾರಿಗಳು ಬರ್ಬರವಾಗಿ ಕೊಂದಿದ್ದರು!
ಆ ರಾತ್ರಿ 23 ಕಾಶ್ಮೀರಿ ಪಂಡಿತರನ್ನು ಮುಸುಕುದಾರಿಗಳು ಬರ್ಬರವಾಗಿ ಕೊಂದಿದ್ದರು!

By

Published : Mar 14, 2022, 10:49 PM IST

ಗಂದರ್‌ಬಾಲ್ (ಜಮ್ಮು ಮತ್ತು ಕಾಶ್ಮೀರ): ಜನವರಿ 25, 1998 ರಂದು ಸೆಂಟ್ರಲ್ ಕಾಶ್ಮೀರದ ಗಂಡರ್‌ಬಾಲ್ ಜಿಲ್ಲೆಯ ವಂಧಮಾ ಗ್ರಾಮದಲ್ಲಿ ನಡೆದ ಭಯಾನಕ ಘಟನೆಯ ನೋವಿನ ನೆನಪುಗಳು ಇನ್ನೂ ತಾಜಾವಾಗಿವೆ ಉಳಿದಿವೆ. ಆ ಘಟನೆ ಈಗಲೂ ಸ್ಥಳೀಯರನ್ನು ಕಾಡುತ್ತಲೇ ಇದೆ.

24 ವರ್ಷಗಳ ಹಿಂದೆ ಗ್ರಾಮದಲ್ಲಿ ಅಪರಿಚಿತ ಮುಸುಕುಧಾರಿ ಬಂದೂಕುಧಾರಿಗಳಿಂದ 23 ಕಾಶ್ಮೀರಿ ಪಂಡಿತರು ನಿರ್ದಯವಾಗಿ ಕೊಲ್ಲಲ್ಪಟ್ಟಿದ್ದರು. ಸ್ಥಳೀಯರ ಪ್ರಕಾರ ಈ ಭೀಕರ ಘಟನೆಯು ಜನವರಿ 25 ಮತ್ತು 26, 1998 ರ ಮಧ್ಯರಾತ್ರಿಯಲ್ಲಿ ನಡೆದಿತ್ತು.

ಸ್ಥಳೀಯರು ಹೇಳೋದೇನು?ನಾವು ಮಂದಿರದ ಒಳಗೆ ತರಾವೀಹ್ ಪ್ರಾರ್ಥನೆ ಮಾಡುತ್ತಿದ್ದಾಗ ಗುಂಡಿನ ಸದ್ದು ಮತ್ತು ಕಿರುಚಾಟಗಳನ್ನು ಕೇಳಿದೆವು. ಮೊದಲಿಗೆ ಇದು ಉಗ್ರಗಾಮಿಗಳು ಮತ್ತು ಭದ್ರತಾ ಪಡೆಗಳ ನಡುವಿನ ಎನ್‌ಕೌಂಟರ್ ಎಂದು ಭಾವಿಸಿದ್ದೆವು. ಆ ವೇಳೆ ಭಯದಿಂದಾಗಿ ನಮಗೆ ಹೊರಗೆ ಕಾಲಿಡಲು ಧೈರ್ಯವಿರಲಿಲ್ಲ ಎಂದು ಘಟನೆ ಬಗ್ಗೆ ವಿವರಿಸಿದ್ದಾರೆ.

ಹೊರಗಿನಿಂದ ಯಾರೋ ಕೂಗಾಡುತ್ತಿದ್ದರು. ದೇವಸ್ಥಾನ ಸೇರಿದಂತೆ ಪಂಡಿತರ ಮನೆಗಳು ಬೆಂಕಿಗಾಹುತಿಯಾಗಿದ್ದವು. ಕೊನೆಗೂ ಏನಾಗುತ್ತಿದೆ ಎಂದು ನೋಡಲು ನಾವು ಮಸೀದಿಯಿಂದ ಹೊರಬಂದೆವು. ಆಗ ಅಲ್ಲಿ ಬೆಂಕಿಯಿಡುವುದನ್ನು ಕಂಡು ಬೆಚ್ಚಿಬಿದ್ದೆವು.

ಮರುದಿನ ಬೆಳಗ್ಗೆ ಸ್ಥಳೀಯರು ಸ್ಥಳಕ್ಕೆ ಧಾವಿಸಿದಾಗ ನಾಲ್ಕು ಪಂಡಿತ್ ಕುಟುಂಬಗಳಿಗೆ ಸೇರಿದ 24 ಸದಸ್ಯರಲ್ಲಿ 23 ಜನರು ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಸಮುದಾಯದ ಏಕಾಂಗಿ ಸದಸ್ಯ ಅಶು (ಆಗ 14 ವರ್ಷ ವಯಸ್ಸು) ಮಾರಣಾಂತಿಕ ಹಲ್ಲೆಯಿಂದ ಪಾರಾಗಿದ್ದ. ಹತ್ಯೆಯಾದವರಲ್ಲಿ ನಾಲ್ಕು ಕುಟುಂಬಗಳ ಸದಸ್ಯರು ಮತ್ತು ಜಮ್ಮುವಿನಿಂದ ಭೇಟಿ ನೀಡಲು ಬಂದ ಕನಿಷ್ಠ ಐದು ಅತಿಥಿಗಳು ಇದ್ದರು ಎಂದು ಭಯಾನಕ ಘಟನೆಯನ್ನು ಕಣ್ಮುಂದೆ ಬರುವ ಹಾಗೆ ಕಟ್ಟಿಕೊಟ್ಟಿದ್ದಾರೆ.

ಆಗಿನ ಪ್ರಧಾನಿ ಐ ಕೆ ಗುಜ್ರಾಲ್ ಅವರು ಜನವರಿ 28 ರಂದು ಸಾವಿಗೀಡಾದವರ ಶೋಕಾಚರಣೆಯಲ್ಲಿ ಪಾಲ್ಗೊಂಡರು. ಅವರು ಗವರ್ನರ್-ಜನರಲ್ ಕೆ.ವಿ ಕೃಷ್ಣರಾವ್ (ನಿವೃತ್ತ), ಆಗಿನ ಮುಖ್ಯಮಂತ್ರಿ ಡಾ. ಫಾರೂಕ್ ಅಬ್ದುಲ್ಲಾ ಮತ್ತು ಕೇಂದ್ರ ಪರಿಸರ ಸಚಿವ ಪ್ರೊ.ಸೈಫುದ್ದೀನ್ ಸೋಜ್ ಅವರೊಂದಿಗೆ ಆಗಮಿಸಿದ್ದರು ಎಂದು ಹೇಳಿದ ಸ್ಥಳೀಯರು, ಇದಾದ ನಂತರ ಈ ಹತ್ಯೆಗೆ ಉಗ್ರಗಾಮಿಗಳೇ ಕಾರಣ ಎಂದು ಜಮ್ಮು ಮತ್ತು ಕಾಶ್ಮೀರ ಸರ್ಕಾರ ಹೇಳಿತು. ಘಟನೆ ಸಂಬಂಧ ಗಂದೇರ್‌ಬಾಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿತ್ತು. ಇದೆಲ್ಲದರ ನಡುವೆ ಇಡೀ ಕಾಶ್ಮೀರವು ಈ ಘಟನೆಯಿಂದ ಬೆಂದು ಹೋಗಿತ್ತು. ಹಲವಾರು ಮಂದಿ ಪಂಡಿತರ ಶೋಕಾಚರಣೆ ಮತ್ತು ಅಂತಿಮ ವಿಧಿಗಳಲ್ಲಿ ಭಾಗವಹಿಸಿದ್ದರು ಎಂದು ದುಃಖ ತೋಡಿಕೊಂಡರು.

ಬದುಕುಳಿದ ಅಶುವನ್ನು ಉಲ್ಲೇಖಿಸಿ ಮಾತನಾಡಿ, ತಮ್ಮ ಮನೆಯ ಸಮೀಪವಿರುವ ಭತ್ತದ ಹುಲ್ಲಿನ ಬಣವೆಯ ಕೆಳಗೆ ಅಡಗಿಕೊಂಡಿದ್ದರಿಂದ ಅವರು ಪಾರಾಗಿದ್ದಾರೆ. ಅವರು ಸ್ಥಳೀಯ ಕಾಶ್ಮೀರಿ ಮುಸ್ಲಿಮರೊಂದಿಗೆ ಸೌಹಾರ್ದತೆ ಮತ್ತು ಸಹೋದರತೆಯಿಂದ ಬದುಕುತ್ತಿದ್ದರು ಎಂದು ಸ್ಥಳೀಯರೊಬ್ಬರು ಹೇಳಿದರು.

ಇನ್ನು ಸಹ ಈ ಹತ್ಯೆಗಳು ಜನರ ಮನಸ್ಸಿನ ಮೇಲೆ ಭಾರಿ ಗಾಯವನ್ನು ಉಂಟುಮಾಡಿದೆ ಎಂದು ಹೇಳುವುದನ್ನು ಮರೆಯಲಿಲ್ಲ. ಇದು ಇಡೀ ಮಾನವೀಯತೆಯನ್ನು ಕೊಂದಂತೆ ಮತ್ತು ನಾವು ಇನ್ನೂ ಆ ದುರದೃಷ್ಟಕರ ರಾತ್ರಿಯನ್ನು ನೆನಪಿಸಿಕೊಳ್ಳುತ್ತೇವೆ ಎಂದು ಮತ್ತೋರ್ವ ಸ್ಥಳೀಯರು ನೋವಿನಿಂದಲೇ ಘಟನೆ ವಿವರಿಸಿದರು.

ಹತ್ಯೆಗಳ ಮೊದಲು ವಂಧಾಮಾದಿಂದ ಜಮ್ಮುವಿಗೆ ವಲಸೆ ಬಂದ ಹಲವಾರು ಪಂಡಿತ್ ಕುಟುಂಬಗಳು ತಮ್ಮ ಮುಸ್ಲಿಂ ನೆರೆಹೊರೆಯವರು ಮತ್ತು ಸ್ನೇಹಿತರನ್ನು ಭೇಟಿಯಾಗಲು ಇಲ್ಲಿಗೆ ಬರುತ್ತಿದ್ದರು ನಾವು ಸಹ ಜಮ್ಮುವಿಗೆ ಭೇಟಿ ನೀಡಿದಾಗ ಅವರನ್ನೂ ನಾವು ಭೇಟಿ ಮಾಡುತ್ತಿದ್ದೆವು. ನಮ್ಮ ಸಹೋದರತ್ವವು ಶಾಶ್ವತವಾಗಿದೆ. ಘಟನೆಯ ಕುರಿತು ತನಿಖೆ ನಡೆಸಿ, ತಪ್ಪಿತಸ್ಥರನ್ನು ಶಿಕ್ಷಿಸಿ ನ್ಯಾಯ ದೊರಕಿಸಿಕೊಡಬೇಕು ಎಂದು ಸ್ಥಳೀಯರು ಆಗ್ರಹ ಮಾಡಿದ್ದಾರೆ.

ABOUT THE AUTHOR

...view details