ಕರ್ನಾಟಕ

karnataka

ETV Bharat / bharat

ಯಾಸಿನ್ ಮಲಿಕ್ ಮನೆಯ ಹೊರಗೆ ಗೂಂಡಾಗಿರಿ : 19 ಜನರ ಬಂಧನ - ಶ್ರೀನಗರದ ಮೈಸುಮಾದಲ್ಲಿರುವ ಯಾಸಿನ್ ಮಲಿಕ್ ಅವರ ಮನೆಯ ಹೊರಗೆ ಗೂಂಡಾಗಿರಿ

ತನಿಖೆ ನಂತರ ನಿಖರ ಗುರುತಿನ ಆಧಾರದ ಮೇಲೆ ಈ ಆರೋಪಿಗಳನ್ನು ಬಂಧಿಸಲಾಗಿದೆ. ಆದಾಗ್ಯೂ, ಅಪರಾಧದಲ್ಲಿ ಭಾಗಿಯಾಗಿರುವ ಇತರ ಆರೋಪಿಗಳ ಪತ್ತೆಗೆ ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದಾರೆ.

ಯಾಸಿನ್ ಮಲಿಕ್ ಮನೆಯ ಹೊರಗೆ ಗೂಂಡಾಗಿರಿ : 19 ಜನರ ಬಂಧನ
ಯಾಸಿನ್ ಮಲಿಕ್ ಮನೆಯ ಹೊರಗೆ ಗೂಂಡಾಗಿರಿ : 19 ಜನರ ಬಂಧನ

By

Published : May 29, 2022, 9:16 PM IST

ಶ್ರೀನಗರ: ಶ್ರೀನಗರದ ಮೈಸುಮಾದಲ್ಲಿರುವ ಯಾಸಿನ್ ಮಲಿಕ್ ಅವರ ಮನೆಯ ಹೊರಗೆ ಗೂಂಡಾಗಿರಿ, ಗಲಭೆ, ದೇಶವಿರೋಧಿ ಘೋಷಣೆ ಮತ್ತು ಕಲ್ಲು ತೂರಾಟದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಜಮ್ಮು ಮತ್ತು ಕಾಶ್ಮೀರ ಪೊಲೀಸರು 19 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

ನಾಪತ್ತೆಯಾಗಿರುವ ಇತರರ ಪತ್ತೆಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ತನಿಖೆ ನಂತರ ನಿಖರ ಗುರುತಿನ ಆಧಾರದ ಮೇಲೆ ಈ ಆರೋಪಿಗಳನ್ನು ಬಂಧಿಸಲಾಗಿದೆ. ಆದಾಗ್ಯೂ, ಅಪರಾಧದಲ್ಲಿ ಭಾಗಿಯಾಗಿರುವ ಇತರ ಆರೋಪಿಗಳ ಪತ್ತೆಗೆ ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದಾರೆ.

ಈ ತಿಂಗಳ 25 ರಂದು ಯಾಸಿನ್ ಮಲಿಕ್ ಅವರ ಮನೆಯ ಹೊರಗೆ ಕೆಲವರು ಬೆಂಕಿ ಹಚ್ಚಿ, ಕಲ್ಲು ತೂರಾಟ ನಡೆಸಿದ್ದರು. ಇಂತಹ ವಿಧ್ವಂಸಕ ಚಟುವಟಿಕೆಗಳಿಂದ ಯುವಕರು ದೂರವಿರುವಂತೆ ಸೂಚಿಸಲಾಗಿದೆ. ಈ ಘಟನೆಗಳನ್ನು ಎಂದಿಗೂ ಸಹಿಸಲಾಗುವುದಿಲ್ಲ ಎಂದು ಶ್ರೀನಗರ ಪೊಲೀಸರು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಶೈಕ್ಷಣಿಕ ವರ್ಷದಿಂದ ಶಾಲಾ ಕಾಲೇಜುಗಳಲ್ಲಿ ಪಠ್ಯವಾಗಿ ಯೋಗ: ಸಿಎಂ

ABOUT THE AUTHOR

...view details