ಕರ್ನಾಟಕ

karnataka

ETV Bharat / bharat

ಮೊಬೈಲ್ ಕಳೆದು ಹೋಗಿದ್ದಕ್ಕೆ ಬಾಲಕ ಆತ್ಮಹತ್ಯೆ - ಹೈದರಾಬಾದ್​ನ ಮೇಡ್ಚಲ್ ಜಿಲ್ಲೆ

ತಾಯಿ ಉಡುಗೊರೆಯಾಗಿ ನೀಡಿದ್ದ ಮೊಬೈಲ್ ಕಳೆದುಹೋಗಿದ್ದಕ್ಕೆ ಬಾಲಕನೊಬ್ಬ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಬಾಲಕ ಆತ್ಮಹತ್ಯೆ
ಬಾಲಕ ಆತ್ಮಹತ್ಯೆ

By

Published : Apr 2, 2021, 1:36 PM IST

ಹೈದರಾಬಾದ್: ಮೊಬೈಲ್​ಗೆ ಈಗಿನ ಜನರು ಅದೆಷ್ಟು ಅಡಿಕ್ಟ್ ಆಗಿದ್ದಾರೆ ಎಂಬುದಕ್ಕೆ ಹೈದರಾಬಾದ್​ನ ಮೇಡ್ಚಲ್ ಜಿಲ್ಲೆಯಲ್ಲಿ ನಡೆದ ಈ ಘಟನೆಯೇ ಸಾಕ್ಷಿಯಾಗಿದೆ. 17 ವರ್ಷದ ಬಾಲಕನೊಬ್ಬ ಮೊಬೈಲ್ ಕಳೆದುಹೋಗಿದ್ದಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಸಾಯಿಕಿರಣ್​ ಆತ್ಮಹತ್ಯೆಗೆ ಶರಣಾದ ಬಾಲಕ. ಸಾಯಿಕಿರಣ್​ಗೆ ಅವನ ತಾಯಿ ಹೇಮಲತಾ ಉಡುಗೊರೆಯಾಗಿರುವ ಮೊಬೈಲ್ ಫೋನ್ ನೀಡಿದ್ದರು. ಆದರೆ, ಯುವಕ ಫೋನ್​ ಕಳೆದುಕೊಂಡಿದ್ದು, ನಂತರ ಮಾನಸಿಕ ಖಿನ್ನತೆಗೆ ಒಳಗಾಗಿದ್ದನು. ಗುರುವಾರ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಇತ್ತೀಚೆಗಷ್ಟೇ ಹೇಮಲತಾ ಗಂಡನನ್ನು ಕಳೆದುಕೊಂಡಿದ್ದರು. ಇದೀಗ ಇದ್ದ ಒಬ್ಬ ಮಗನೂ ಆತ್ಮಹತ್ಯೆ ಮಾಡಿಕೊಂಡಿದ್ದರಿಂದ ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟುವಂತಿದೆ.

ಈ ಕುರಿತು ದುಂಡಿಗಲ್ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ABOUT THE AUTHOR

...view details