ಆಗ್ರಾ(ಉತ್ತರ ಪ್ರದೇಶ):ಮಣಪ್ಪುರಂ ಗೋಲ್ಡ್ ಲೋನ್ ಬ್ರಾಂಚ್ಗೆ ನುಗ್ಗಿದ ದುಷ್ಕರ್ಮಿಗಳು 17 ಕೆ.ಜಿ ಚಿನ್ನ ಮತ್ತು 5 ಲಕ್ಷ ರೂಪಾಯಿಗೂ ಹೆಚ್ಚು ನಗದು ದೋಚಿರುವ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ.
ಶುಕ್ರವಾರ ಆಗ್ರಾದ ಜಗದೀಶ್ಪುರದ ಮಣಪ್ಪುರಂ ಗೋಲ್ಡ್ ಲೋನ್ ಬ್ರಾಂಚ್ಗೆ ನುಗ್ಗಿದ್ದ ನಾಲ್ವರು ದುಷ್ಕರ್ಮಿಗಳು ಕಚೇರಿಯ ಗನ್ ಮ್ಯಾನ್ ಪಿಯೂಷ್ ಮತ್ತು ಅಸಿಸ್ಟೆಂಟ್ ಮ್ಯಾನೇಜರ್ ನೀರಜ್ ಕುಮಾರ್ಗೆ ಬೆದರಿಸಿ 550 ಪೊಟ್ಟಣಗಳಲ್ಲಿದ್ದ ಚಿನ್ನ ಮತ್ತು ಮತ್ತು ನಗದನ್ನು ದೋಚಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.