ರಾಮೇಶ್ವರಂ(ತಮಿಳುನಾಡು): ನೆರೆಯ ಶ್ರೀಲಂಕಾ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಉದ್ಯೋಗ ಹಾಗೂ ಆಹಾರದ ಕೊರತೆ ಕಾರಣ ಅಲ್ಲಿ ಬದುಕಲು ಸಾಧ್ಯವಾಗದೇ ಜನರು ಪಲಾಯನ ಮಾಡುತ್ತಿದ್ದು, ಸುಮಾರು 16 ಶ್ರೀಲಂಕಾ ತಮಿಳರು ರಾಮೇಶ್ವರಂಗೆ ಬಂದಿದ್ದಾರೆ.
ಶ್ರೀಲಂಕಾದಲ್ಲಿ ರಾಜಪಕ್ಸೆ ಸಹೋದರರ ಆಡಳಿತವು ಭ್ರಷ್ಟಾಚಾರದಿಂದ ಕೂಡಿದೆ ಎಂದು ಕೆಲ ಜನರ ಗುಂಪು ಆರೋಪಿಸಿದೆ. ಇತ್ತ ಕಳೆದ ಮಾರ್ಚ್.17ರಂದು ಅಲ್ಲಿನ ಜನರು ದಿನಸಿ ದರವನ್ನು ಹೆಚ್ಚಿಸಿದ ಕ್ರಮಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ಕೂಡ ನಡೆಸಿದ್ದರು. ಇದನ್ನೆಲ್ಲ ಕಂಡು ಭಾರತ ಸರ್ಕಾರ, ಶ್ರೀಲಂಕಾ ಸರ್ಕಾರಕ್ಕೆ 7,500 ಕೋಟಿ ಸಾಲವನ್ನು ನೀಡಿ ಸಹಾಯ ಹಸ್ತ ಚಾಚಿದೆ.