ನವ ದೆಹಲಿ: ದಿಲ್ಲಿ ಸರಕಾರಿ ಶಾಲೆಗಳ ತರಗತಿ ಕೊಠಡಿಗಳ ನಿರ್ಮಾಣದಲ್ಲಿ ನಡೆದಿರುವ ಅವ್ಯವಹಾರಗಳ ಕುರಿತು ವಿಶೇಷ ಸಂಸ್ಥೆಯಿಂದ ತನಿಖೆ ನಡೆಸುವಂತೆ ಕೇಂದ್ರೀಯ ಜಾಗೃತ ಆಯೋಗ ಶಿಫಾರಸು ಮಾಡಿದೆ. ಇದರಲ್ಲಿ 1,300 ಕೋಟಿ ರೂ.ಗಳ ಹಗರಣ ನಡೆದಿದೆ ಎಂದು ಅಧಿಕೃತ ಮೂಲಗಳು ಶುಕ್ರವಾರ ತಿಳಿಸಿವೆ.
ತನಿಖೆಗೆ ಶಿಫಾರಸು ಮಾಡಿದ ಜಾಗೃತ ನಿರ್ದೇಶನಾಲಯದ ವರದಿಯನ್ನು ದೆಹಲಿ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸಲ್ಲಿಸಲಾಗಿದೆ ಎಂದು ತಿಳಿದು ಬಂದಿದೆ. ಕೇಂದ್ರೀಯ ಜಾಗೃತ ಆಯೋಗ (ಸಿವಿಸಿ) ಫೆಬ್ರವರಿ 17, 2020 ರ ವರದಿಯಲ್ಲಿ, ಲೋಕೋಪಯೋಗಿ ಇಲಾಖೆಯಿಂದ ದೆಹಲಿ ಸರ್ಕಾರಿ ಶಾಲೆಗಳ 2,400 ಕ್ಕೂ ಹೆಚ್ಚು ತರಗತಿ ಕೊಠಡಿಗಳ ನಿರ್ಮಾಣದಲ್ಲಿ ಭಾರಿ ಅಕ್ರಮಗಳು ನಡೆದಿವೆ ಎಂದು ಎತ್ತಿ ತೋರಿಸಿದೆ.
ಸಿವಿಸಿ ಫೆಬ್ರವರಿ 2020 ರಲ್ಲಿ ಈ ವಿಷಯದ ಬಗ್ಗೆ ಅಭಿಪ್ರಾಯ ಕೋರಿ ದೆಹಲಿ ಸರ್ಕಾರದ ಜಾಗೃತ ನಿರ್ದೇಶನಾಲಯಕ್ಕೆ ವರದಿಯನ್ನು ಕಳುಹಿಸಿತ್ತು.