ಭೋಪಾಲ್ (ಮಧ್ಯಪ್ರದೇಶ):ಮಧ್ಯಪ್ರದೇಶದ ಭೋಪಾಲ್ನಲ್ಲಿ ಶುಕ್ರವಾರದಿಂದ 12ನೇ ರಾಷ್ಟ್ರೀಯ ಹಿರಿಯ ಮಹಿಳಾ ಹಾಕಿ ಚಾಂಪಿಯನ್ಶಿಪ್ ಆರಂಭವಾಗಿದೆ. ಇದರಲ್ಲಿ ದೇಶದ 27 ತಂಡಗಳು ಭಾಗವಹಿಸಿದ್ದು, ಹಲವು ಅಂತಾರಾಷ್ಟ್ರೀಯ ಆಟಗಾರರು ಪಾಲ್ಗೊಳ್ಳಲಿದ್ದಾರೆ.
ಹಿರಿಯ ಮಹಿಳಾ ಹಾಕಿ ಚಾಂಪಿಯನ್ಶಿಪ್: ಕರ್ನಾಟಕ ಸೇರಿ 27 ತಂಡಗಳು ಭಾಗಿ
ಭೋಪಾಲ್ನ ಮೇಜರ್ ಧ್ಯಾನ್ ಚಂದ್ ಹಾಕಿ ಮೈದಾನದಲ್ಲಿ ಶುಕ್ರವಾರದಿಂದ ಮೇ 17ರವರೆಗೆ ರಾಷ್ಟ್ರೀಯ ಹಿರಿಯ ಮಹಿಳಾ ಹಾಕಿ ಚಾಂಪಿಯನ್ಶಿಪ್ ಜರುಗಲಿದೆ.
ಹಿರಿಯ ಮಹಿಳಾ ಹಾಕಿ ಚಾಂಪಿಯನ್ಶಿಪ್
ಇಲ್ಲಿನ ಮೇಜರ್ ಧ್ಯಾನ್ ಚಂದ್ ಹಾಕಿ ಮೈದಾನದಲ್ಲಿ ಶುಕ್ರವಾರದಿಂದ ಮೇ 17 ರವರೆಗೆ ಈ ಹಾಕಿ ಚಾಂಪಿಯನ್ಶಿಪ್ ಜರುಗಲಿದೆ. ಕರ್ನಾಟಕದ ತಂಡವೂ ಪಾಲ್ಗೊಂಡಿದ್ದು, ಒಟ್ಟು ಎಂಟು ಗುಂಪುಗಳನ್ನು ರಚಿಸಲಾಗಿದೆ. ಗುಂಪುಗಳ ವಿವರ ಹೀಗಿದೆ.
- ಎ-ಗುಂಪು: ಮಧ್ಯಪ್ರದೇಶ, ಚಂಡೀಗಢ, ಬಿಹಾರ
- ಬಿ-ಗುಂಪು: ಹರಿಯಾಣ, ಆಸ್ಸೋಂ, ಪಶ್ಚಿಮ ಬಂಗಾಳ
- ಸಿ-ಗುಂಪು: ಪಂಜಾಬ್, ಛತ್ತೀಸ್ಗಢ್, ತ್ರಿಪುರ
- ಡಿ-ಗುಂಪು: ಮಹಾರಾಷ್ಟ್ರ, ರಾಜಸ್ಥಾನ, ಉತ್ತರಾಖಂಡ್
- ಇ-ಗುಂಪು: ಜಾರ್ಖಂಡ್, ಆಂಧ್ರಪ್ರದೇಶ, ಪುದುಚೇರಿ
- ಎಫ್- ಗುಂಪು: ಕರ್ನಾಟಕ, ತಮಿಳುನಾಡು, ಅರುಣಾಚಲ ಪ್ರದೇಶ, ಅಂಡಮಾನ್ ಮತ್ತು ನಿಕೋಬಾರ್
- ಜಿ-ಗುಂಪು: ಉತ್ತರ ಪ್ರದೇಶ, ದೆಹಲಿ, ಗೋವಾ, ಗುಜರಾತ್
- ಹೆಚ್-ಗುಂಪು: ಒಡಿಶಾ, ಕೇರಳ, ತೆಲಂಗಾಣ, ಹಿಮಾಚಲ ಪ್ರದೇಶ
ಇದನ್ನೂ ಓದಿ:ನೀರಜ್ ಚೋಪ್ರಾ ಉಡುಗೊರೆಯಾಗಿ ಪಡೆದ ಕಾರಿಗೆ ಸಾರಿಗೆ ಬಸ್ ಡಿಕ್ಕಿ