ನವದೆಹಲಿ: ಇಲ್ಲಿನ ಬಾತ್ರಾ ಆಸ್ಪತ್ರೆಯ ಗ್ಯಾಸ್ಟ್ರೋಎಂಟರಾಲಜಿ ವಿಭಾಗದ ಮುಖ್ಯಸ್ಥರು ಸೇರಿದಂತೆ 12 ಮಂದಿ ಕೊರೊನಾ ಸೋಂಕಿತರು ಆಮ್ಲಜನಕದ ಕೊರತೆಯಿಂದ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
"ಒಮ್ಮೆ ರೋಗಿಯು ಸಮತೋಲನ ಕಳೆದುಕೊಂಡರೆ ಆತನನ್ನು ಉಳಿಸುವುದು ಕಷ್ಟ. ಮುಂದಿನ ದಿನಗಳಲ್ಲಿ ಮತ್ತಷ್ಟು ಸಾವು-ನೋವು ಸಂಭವಿಸುವ ಸಾಧ್ಯತೆಯಿದೆ. ಮುಂದಿನ 24-48 ಗಂಟೆಗಳಲ್ಲಿ ಸಾವಿನ ಪ್ರಮಾಣವು ಕಳೆದ ಕೆಲವು ದಿನಗಳಲ್ಲಿ ಇಲ್ಲಿವರೆಗೆ ಹೊಂದಿದ್ದ ಸರಾಸರಿಗಿಂತ ಹೆಚ್ಚಿರುತ್ತದೆ" ಎಂದು ಆಸ್ಪತ್ರೆಯ ಕಾರ್ಯನಿರ್ವಾಹಕ ನಿರ್ದೇಶಕ ಸುಧಾನ್ಶು ಬಂಕಟಾ ಹೇಳಿದರು.
ಆಮ್ಲಜನಕದ ಕೊರತೆಯಿಂದ ಸಾವನ್ನಪ್ಪಿದವರಲ್ಲಿ ಗ್ಯಾಸ್ಟ್ರೋಎಂಟರಾಲಜಿ ವಿಭಾಗದ ಮುಖ್ಯಸ್ಥ ಆರ್.ಕೆ.ಹಿಮ್ಥಾನಿ ಸೇರಿದ್ದಾರೆ ಎಂದು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಎಸ್.ಸಿ.ಎಲ್.ಗುಪ್ತಾ ಹೇಳಿದ್ದಾರೆ.